* ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ (IMD) ಬಿಡುಗಡೆ ಮಾಡಿದ IMD ಸ್ಮಾರ್ಟ್ ಸಿಟಿ ಸೂಚ್ಯಂಕ 2025ರಲ್ಲಿ ಸ್ವಿಟ್ಜರ್ಲೆಂಡ್ನ ಜ್ಯೂರಿಚ್ ಅಗ್ರಸ್ಥಾವನ್ನು ಪಡೆದುಕೊಂಡಿದೆ. * IMD ಪ್ರಕಾರ, ಸ್ಮಾರ್ಟ್ ಸಿಟಿ ಎಂದರೆ "ನಗರೀಕರಣದ ಪ್ರಯೋಜನಗಳನ್ನು ಹೆಚ್ಚಿಸಲು ಮತ್ತು ಅದರ ನಾಗರಿಕರಿಗೆ ನಗರೀಕರಣದ ಅನಾನುಕೂಲಗಳನ್ನು ಕಡಿಮೆ ಮಾಡಲು ತಂತ್ರಜ್ಞಾನವನ್ನು ಅನ್ವಯಿಸುವ ನಗರ ವ್ಯವಸ್ಥೆ" ಆಗಿದೆ. * ಜ್ಯೂರಿಚ್ ತನ್ನ ನಂ. 1 ಸ್ಥಾನವನ್ನು ಉಳಿಸಿಕೊಂಡರೆ, ಜಿನೀವಾ ಮೂರನೇ ಸ್ಥಾನಕ್ಕೆ ಏರಿದೆ ಮತ್ತು ಲೌಸನ್ನೆ 10 ನೇ ಸ್ಥಾನದಲ್ಲಿದೆ, ಇದು ಸ್ವಿಟ್ಜರ್ಲೆಂಡ್ನ ಬಲವಾದ ನಗರ ಯೋಜನೆ ಮತ್ತು ನಾಗರಿಕ ಕೇಂದ್ರಿತ ಮೂಲಸೌಕರ್ಯವನ್ನು ಪ್ರತಿಬಿಂಬಿಸುತ್ತದೆ.* ಸ್ಮಾರ್ಟ್ ಸಿಟಿ ಸೂಚ್ಯಂಕವನ್ನು ಐದು ಪ್ರಮುಖ ನಿಯತಾಂಕಗಳ ಆಧಾರದ ಮೇಲೆ ಶ್ರೇಣೀಕರಿಸಲಾಗಿದೆ : 1. ಆರೋಗ್ಯ ಮತ್ತು ಸುರಕ್ಷತೆ2. ಚಲನಶೀಲತೆ3. ಚಟುವಟಿಕೆಗಳು4. ಅವಕಾಶಗಳು5. ಆಡಳಿತ* ಜ್ಯೂರಿಚ್ ವಿಶ್ವದ ಅತ್ಯಂತ ಸ್ಮಾರ್ಟ್ ನಗರವಾಗಿ ಉಳಿದಿದೆ. ನಾಗರಿಕ ಕೇಂದ್ರಿತ ಮೂಲಸೌಕರ್ಯ ಮತ್ತು ನಾವೀನ್ಯತೆಯಿಂದಾಗಿ ಸ್ವಿಸ್ ನಗರಗಳು (ಜ್ಯೂರಿಚ್, ಜಿನೀವಾ, ಲೌಸನ್ನೆ) ಉತ್ತಮ ಸಾಧನೆ ಮಾಡುತ್ತಲೇ ಇವೆ.* ದುಬೈ 8 ಮತ್ತು ಅಬುಧಾಬಿ 5 ನಗರಗಳು ಅತ್ಯಂತ ವೇಗವಾಗಿ ಸುಧಾರಣೆ ಕಂಡಿದ್ದು, ಮಧ್ಯಪ್ರಾಚ್ಯದ ಬೆಳೆಯುತ್ತಿರುವ ನಗರ ನಾಯಕತ್ವವನ್ನು ಸೂಚಿಸುತ್ತಿವೆ.* ಜಾಗತಿಕ ಸ್ಮಾರ್ಟ್ ಸಿಟಿ ಆಂದೋಲನದಲ್ಲಿ ಭಾರತೀಯ ನಗರಗಳು ಪ್ರಗತಿ ಸಾಧಿಸುತ್ತಿದ್ದರೂ , ಅವು ಇನ್ನೂ ಟಾಪ್ 20 ಪಟ್ಟಿಯಿಂದ ದೂರದಲ್ಲಿವೆ. ಭಾರತದ ನಗರಗಳಲ್ಲಿ ದೆಹಲಿ 104 ನೇ ಸ್ಥಾನದಲ್ಲಿದೆ. ಮುಂಬೈ ಮತ್ತು ಬೆಂಗಳೂರು ಕೂಡ ಸ್ಥಾನ ಪಡೆದಿವೆ ಆದರೆ ಕಡಿಮೆ ಸ್ಥಾನಗಳಲ್ಲಿವೆ. ಹೈದರಾಬಾದ್ ಐಟಿ ಕೇಂದ್ರವಾಗಿದ್ದರೂ, ದುರ್ಬಲ ಸಿಸಿಸಿ ರೇಟಿಂಗ್ನೊಂದಿಗೆ 109 ನೇ ಸ್ಥಾನದಲ್ಲಿದೆ. ಸಿಂಗಾಪುರ 5ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಕುಸಿದರೆ , ಕ್ಯಾನ್ಬೆರಾ 3ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಕುಸಿದಿದೆ.* IMD ವಿಶ್ವದ ಟಾಪ್ 10 ಸ್ಮಾರ್ಟ್ ನಗರಗಳು 2025 : 1. ಜ್ಯೂರಿಚ್- ಸ್ವಿಟ್ಜರ್ಲ್ಯಾಂಡ್2. ಓಸ್ಲೋ- ನಾರ್ವೇ3. ಜಿನೀವಾ- ಸ್ವಿಟ್ಜರ್ಲ್ಯಾಂಡ್4. ದುಬೈ- ಯುಎಇ5. ಅಬುಧಾಬಿ-ಯುಎಇ6. ಲಂಡನ್-ಯುನೈಟೆಡ್ ಕಿಂಗ್ಡಮ್7. ಕೋಪನ್ ಹ್ಯಾಗನ್-ಡೆನ್ಮಾರ್ಕ್8. ಕ್ಯಾನ್ಬೆರಾ-ಆಸ್ಟ್ರೇಲಿಯಾ9. ಸಿಂಗಾಪುರ್-ಸಿಂಗಾಪುರ್10. ಲೌಸನ್ನೆ-ಸ್ವಿಟ್ಜರ್ಲ್ಯಾಂಡ್* ಸ್ಮಾರ್ಟ್ ಸಿಟಿ ಸೂಚ್ಯಂಕ 2025 ರಲ್ಲಿ ಭಾರತೀಯ ನಗರಗಳ ಸ್ಥಾನ : - ದೆಹಲಿ : 104 - ಮುಂಬೈ : 106- ಹೈದರಾಬಾದ್ : 109- ಬೆಂಗಳೂರು : 110