* ಭಾರತವು ಈಗ ಅಮೆರಿಕಕ್ಕೆ ಸ್ಮಾರ್ಟ್ಫೋನ್ ರವಾನೆ ಮಾಡುವ ಅತಿದೊಡ್ಡ ತಯಾರಿಕಾ ಕೇಂದ್ರವಾಗಿ ಚೀನಾವನ್ನು ಹಿಂದಿಕ್ಕಿದೆ. ಈ ಬದಲಾವಣೆ 2025ರ ಎರಡನೇ ತ್ರೈಮಾಸಿಕದಲ್ಲಿ ಸಂಭವಿಸಿದೆ.* ಕ್ಯಾನಲಿಸ್ ಸಂಸ್ಥೆಯ ವಿಶ್ಲೇಷಣೆಯಂತೆ, ಚೀನಾದಿಂದ ಅಮೆರಿಕಕ್ಕೆ ಸಾಗುವ ಸ್ಮಾರ್ಟ್ಫೋನ್ಗಳ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.* ಅಮೆರಿಕ ಮತ್ತು ಚೀನಾ ನಡುವೆ ಸುಂಕದ ವಿಚಾರವಾಗಿ ನಡೆಯುತ್ತಿರುವ ನಿಶ್ಚಿತತೆಯಿಲ್ಲದ ಮಾತುಕತೆಗಳು ಇದಕ್ಕೆ ಕಾರಣವಾಗಿದೆ.* ಏಪ್ರಿಲ್–ಜೂನ್ ಅವಧಿಯಲ್ಲಿ, ಅಮೆರಿಕ ಆಮದು ಮಾಡಿರುವ ಸ್ಮಾರ್ಟ್ಫೋನ್ಗಳಲ್ಲಿ ಚೀನಾದಲ್ಲಿ ಜೋಡಿಸಲಾದ ಫೋನ್ಗಳ ಶೇ.25 ಮಾತ್ರವಿದೆ. ಇದೇ ಅವಧಿಯಲ್ಲಿ ಭಾರತದಲ್ಲಿ ತಯಾರಾದ ಸ್ಮಾರ್ಟ್ಫೋನ್ಗಳ ಪಾಲು ಶೇ.44ಕ್ಕೆ ಏರಿಕೆಯಾಗಿದೆ.