* ವಿಶ್ವ ಆರ್ಥಿಕ ವೇದಿಕೆ 6 ನವೆಂಬರ್ 2025 ರಲ್ಲಿ WEF ಸ್ವಿಟ್ಜರ್‌ಲ್ಯಾಂಡ್ ನನ್ನಲ್ಲಿರುವ ಸಂಸ್ಥೆ (World Economic Forum – WEF)ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಜಾಗತಿಕ ಕೃಷಿ ವ್ಯವಸ್ಥೆಯ ಭವಿಷ್ಯವನ್ನು ತಂತ್ರಜ್ಞಾನ ಹೇಗೆ ರೂಪಿಸುತ್ತಿದೆ ಎಂಬ ವಿಷಯಕ್ಕೆ ಬೆಳಕು ಚೆಲ್ಲುತ್ತದೆ.* ಜನಸಂಖ್ಯೆಯ ಏರಿಕೆ, ಹವಾಮಾನ ಬದಲಾವಣೆ, ನೀರಿನ ಕೊರತೆ, ಮಣ್ಣಿನ ಫಲವತ್ತತೆಯ ಕುಸಿತ, ಮತ್ತು ಆಹಾರದ ಗುಣಮಟ್ಟ ಕುಸಿಯುತ್ತಿರುವ ಸಂದರ್ಭದಲ್ಲಿ, ಕೃಷಿ ಕ್ಷೇತ್ರದಲ್ಲಿ ಡೀಪ್-ಟೆಕ್ (Deep-Tech) ಆಧಾರಿತ ಪರಿಹಾರಗಳು ಅತ್ಯಗತ್ಯವಾಗುತ್ತಿದೆ.* ಈ ವರದಿ ಭವಿಷ್ಯದ ಆಹಾರ ವ್ಯವಸ್ಥೆಯನ್ನು ತಾಂತ್ರಿಕವಾಗಿ, ಆರ್ಥಿಕವಾಗಿ ಮತ್ತು ಪರಿಸರಪರವಾಗಿ ಬಲಪಡಿಸುವ ಹಲವಾರು ಮಾರ್ಗಗಳನ್ನು ಸೂಚಿಸುತ್ತದೆ.* 🧬 ಡೀಪ್-ಟೆಕ್ ಎಂದರೇ:ವೈಜ್ಞಾನಿಕ ಸಂಶೋಧನೆ, ಗಣನೆ, ಬಯೋ-ಇಂಜಿನಿಯರಿಂಗ್, ಸೆನ್ಸರ್ ವ್ಯವಸ್ಥೆಗಳು, ಕೃತಕ ಬುದ್ಧಿಮತ್ತೆ (AI), ಮಶೀನ್ ಲರ್ನಿಂಗ್, Internet of Things (IoT) ಮುಂತಾದ ಆಳವಾದ ಜ್ಞಾನ ಮತ್ತು ತಂತ್ರಜ್ಞಾನಗಳ ಸಂಯೋಜನೆ.🔧 WEF ವರದಿ ಶಿಫಾರಸುಗಳು:- ಸರ್ಕಾರದಿಂದ ಹೆಚ್ಚಿನ ಸಂಶೋಧನಾ ಹೂಡಿಕೆ- ರೈತರಿಗೆ ತಂತ್ರಜ್ಞಾನ ತರಬೇತಿ- ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳು- ತಂತ್ರಜ್ಞಾನ ಪ್ರವೇಶ ಖರ್ಚು ಕಡಿತ* WEF ವರದಿ ಪ್ರಕಾರ, 2050ರ ವೇಳೆಗೆ ಜಾಗತಿಕ ಆಹಾರ ಬೇಡಿಕೆ 50–60% ಏರಲಿದೆ.WEF ವರದಿ ಪ್ರಕಾರ:ಅಗ್ರೋ-ಟೆಕ್ ಸ್ಟಾರ್ಟ್‌ಅಪ್‌ಗಳು ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ ಮತ್ತು IoT ಆಧಾರಿತ ಸೆನ್ಸರ್‌ಗಳ ತಯಾರಿ, ಡ್ರೋನ್ ಸೇವೆಗಳು, AI ಪ್ಲಾಟ್‌ಫಾರ್ಮ್ ಅಭಿವೃದ್ಧಿಮುಂದೆ ದೊಡ್ಡ ಉದ್ಯಮವಾಗಲಿದೆ.ಭಾರತಕ್ಕೆ ದೊರೆಯುವ ಅವಕಾಶಗಳು:- ದೊಡ್ಡ ಕೃಷಿ ಮಾರುಕಟ್ಟೆ- ಸಮೃದ್ಧ ಮಣ್ಣು- ಯುವ ಉದ್ಯಮಿಗಳು- ಸರ್ಕಾರದ ಡ್ರೋನ್ ನೀತಿಗಳು ಇವು ವೇಗಕ್ಕೆ ಕಾರಣವಾಗುತ್ತವೆ.PM Kisan, Soil Health Card, Digital Agriculture Mission ಯೋಜನೆಗಳು ಈ ಕ್ಷೇತ್ರಕ್ಕೆ ಬಲ.