* ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಜಾಗತಿಕ ಸಮಾನತೆ ಸೂಚ್ಯಂಕದಲ್ಲಿ ಭಾರತ 25.5 ಅಂಕ ಗಳಿಸಿ 167 ದೇಶಗಳ ಪೈಕಿ 4ನೇ ಸ್ಥಾನದಲ್ಲಿದೆ.* ಈ ಮೂಲಕ ಭಾರತ ಅಮೆರಿಕ, ಬ್ರಿಟನ್, ಚೀನಾ ದೇಶಗಳನ್ನು ಹಿಂದಿಕ್ಕಿದೆ. ಮೊದಲ ಮೂರು ಸ್ಥಾನಗಳಲ್ಲಿ ಸ್ಲೊವಾಕಿಯಾ, ಸ್ಲೊವೇನಿಯಾ ಮತ್ತು ಬೆಲಾರಸ್ ರಾಷ್ಟ್ರಗಳಿವೆ.* ಈ ಸೂಚ್ಯಂಕವು ದೇಶವೊಂದರ ಆದಾಯ, ಸಂಪತ್ತು ಮತ್ತು ಬಳಕೆ ಇತ್ಯಾದಿ ಅಂಶಗಳಲ್ಲಿ ಸಮಾನತೆ ಎಷ್ಟಿದೆ ಎಂಬುದನ್ನು ಅಳೆಯುತ್ತದೆ. 0 ಅಂಕ ಸಮಾನತೆಯ ಗುರಿಯಾಗಿದ್ದು, 100 ಅಂಕ ಅತಿದೊಡ್ಡ ಅಸಮಾನತೆಯನ್ನು ಸೂಚಿಸುತ್ತದೆ.* ಕಳೆದ ದಶಕದಲ್ಲಿ ಭಾರತದಲ್ಲಿ ತೀವ್ರ ಬಡತನ ಶೇ.29ರಿಂದ ಶೇ.11.3ಕ್ಕೆ ಇಳಿದಿದೆ. 20 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ತಲಾ ಜಿಡಿಪಿ ಹೆಚ್ಚಿದ್ದು, ಬಹು ಆಯಾಮದ ಬಡತನ ಇಳಿಕೆಯಾಗಿದೆ.* ಈ ಸಾಧನೆಗಳ ನಡುವೆಯೂ ಸುಮಾರು 35 ಕೋಟಿ ಜನರು ಗುಣಮಟ್ಟದ ಆಹಾರ, ಮನೆ, ಆರೋಗ್ಯ ಹಾಗೂ ಶಿಕ್ಷಣದಿಲ್ಲದ ಬದುಕು ನಡೆಸುತ್ತಿದ್ದಾರೆ. ಶೇ.1 ಶ್ರೀಮಂತರು ದೇಶದ ಶೇ.40 ಸಂಪತ್ತನ್ನು ಹೊಂದಿದ್ದು, ಕೆಳಗಿನ ಶೇ.50ರಷ್ಟು ಜನ ಶೇ.6.4 ಸಂಪತ್ತಿಗೆ ಮಾತ್ರ ಸೀಮಿತ.* ಗುಣಮಟ್ಟದ ಜೀವನಕ್ಕಾಗಿ ಪ್ರತಿದಿನದ ಖರ್ಚು ಕನಿಷ್ಠ ₹350 ಇರಬೇಕು. ನಗರದಲ್ಲಿ ಬಾಡಿಗೆ ಮತ್ತು ಸ್ಥಿರ ಉದ್ಯೋಗದ ಕೊರತೆ, ಗ್ರಾಮೀಣದಲ್ಲಿ ಭೂಮಿ ವಿಭಜನೆಯಂತಹ ಅಂಶಗಳು ಪ್ರಮುಖ ಅಡೆತಡೆಯಾಗಿವೆ. * ಆರೋಗ್ಯ ತುರ್ತು ಸಂದರ್ಭಗಳು ಬಡವರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿದೆ.