* ಸ್ಲೊವಾಕಿಯಾ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ‘ಕಾನ್ಸ್ಟಂಟೈನ್ ದಿ ಫಿಲಾಸಫರ್ ವಿಶ್ವವಿದ್ಯಾಲಯ’ದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನವಾಯಿತು.* ನಾಲ್ಕು ದಿನಗಳ ಸ್ಲೊವಾಕಿಯಾ ಮತ್ತು ಪೋರ್ಚುಗಲ್ ಪ್ರವಾಸದಲ್ಲಿ ಭಾಗವಹಿಸುತ್ತಿರುವ ಮುರ್ಮು ಅವರು ವಿಶ್ವವಿದ್ಯಾಲಯದ ಆವರಣಕ್ಕೆ ಆಗಮಿಸಿ ಈ ಗೌರವವನ್ನು ಸ್ವೀಕರಿಸಿದರು.* ಸಾರ್ವಜನಿಕ ಸೇವೆಯಲ್ಲಿ ಅವರ ಅತಿದೊಡ್ಡ ಕೊಡುಗೆಗೆ ಗೌರವ ಸೂಚಕವಾಗಿ ವಿಶ್ವವಿದ್ಯಾಲಯವು ಈ ಡಾಕ್ಟರೇಟ್ ಪದವಿಯನ್ನು ನೀಡಿದೆ.* ಶಿಕ್ಷಣ, ಮಹಿಳಾ ಶಕ್ತೀಕರಣ, ಸಾಂಸ್ಕೃತಿಕ ಹಾಗೂ ಭಾಷಾ ವೈವಿಧ್ಯತೆಯ ಪ್ರೋತ್ಸಾಹ ಮತ್ತು ಸಂರಕ್ಷಣೆಯಲ್ಲಿನ ಪಾತ್ರಕ್ಕೆ ಮೆಚ್ಚುಗೆ ಸೂಚಿಸಲು ಈ ಗೌರವ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.* ಗೌರವ ಸ್ವೀಕರಿಸಿದ ಮುರ್ಮು ಅವರು, "ಈ ಗೌರವವನ್ನು ನಾನು ಭಾರತದ 140 ಕೋಟಿ ನಾಗರಿಕರ ಪರವಾಗಿ ಸ್ವೀಕರಿಸುತ್ತಿದ್ದೇನೆ" ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.