* ಕರ್ನಾಟಕ ರಾಜ್ಯವು ದೇಶದಲ್ಲಿ ಕಬ್ಬು ಬೆಳೆಯುವುದರಲ್ಲಿ ಮತ್ತು ಸಕ್ಕರೆ ಉತ್ಪಾದನೆಯಲ್ಲಿ 3ನೇ ಸ್ಥಾನದಲ್ಲಿದೆ. ದೇಶದ ಒಟ್ಟು ಸಕ್ಕರೆ ಉತ್ಪಾದನೆಯ ಶೇ.16 ರಷ್ಟನ್ನು ಕರ್ನಾಟಕ ರಾಜ್ಯ ಉತ್ಪಾದಿಸುತ್ತಿದೆ. ರಾಜ್ಯದಲ್ಲಿ ಆಂತರಿಕವಾಗಿ ಸಕ್ಕರೆ ಬಳಕೆಯ ಪ್ರಮಾಣವು ಸುಮಾರು 25 ರಿಂದ 28 ಲಕ್ಷ ಮೆ. ಟನ್ ಆಗಿದೆ.* 'ಮುಂಬರುವ ಹಂಗಾಮಿನಲ್ಲಿ 6 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸುವ ಗುರಿಯಿದ್ದು ಹೊಸ ಆವಿಷ್ಕಾರಗಳ ಕುರಿತು ತಜ್ಞರು ತಾಂತ್ರಿಕ ಸಮಾವೇಶ ನಡೆಸಿ ಮಾರ್ಗದರ್ಶನ ಮಾಡಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ. ರಾಜ್ಯದಲ್ಲಿ 80 ಸಕ್ಕರೆ ಕಾರ್ಖಾನೆಗಳಿವೆ.* ಕರ್ನಾಟಕದಲ್ಲಿ 2021ರ ಮಾ.18ಕ್ಕೆ 66 ಸಕ್ಕರೆ ಕಾರ್ಖಾನೆಗಳು 4.37 ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಿ, 41.84 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ. ಈಗಾಗಲೆ ಬಹುತೇಕ ಸಕ್ಕರೆ ಕಾರ್ಖಾನೆಗಳು ಹಂಗಾಮನ್ನು ಮುಗಿಸಿವೆ. ನಾಲ್ಕು ಸಕ್ಕರೆ ಕಾರ್ಖಾನೆಗಳು ಮಾತ್ರ ಇನ್ನೂ ಕಾರ್ಯನಿರ್ವಹಿಸುತ್ತಿವೆ. * ಕಳೆದ ವರ್ಷ(2020) ರಾಜ್ಯದ 63 ಸಕ್ಕರೆ ಕಾರ್ಖಾನೆಗಳು 33.35 ಲಕ್ಷ ಟನ್ ಸಕ್ಕರೆ ಉತ್ಪಾದಿಸಿದ್ದವು. ಈ ಮೂಲಕ ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ ಪಡೆದುಕೊಂಡಿದೆ. * ಮಹಾರಾಷ್ಟ್ರ ರಾಜ್ಯವು 2021ರ ಮಾ.15ಕ್ಕೆ 95.05 ಲಕ್ಷಟನ್ ಸಕ್ಕರೆ ಉತ್ಪಾದಿಸಿದೆ. ಕಳೆದ ವರ್ಷ ಇದೇ ಅವಧಿಗೆ 55.85 ಲಕ್ಷ ಟನ್ ಸಕ್ಕರೆ ಉತ್ಪಾದಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ 38.20 ಲಕ್ಷ ಟನ್ ಅಧಿಕ ಸಕ್ಕರೆ ಉತ್ಪಾದಿಸುವ ಮೂಲಕ ದೇಶಕ್ಕೆ ನಂ.1 ಸ್ಥಾನದಲ್ಲಿದೆ. * ಉತ್ತರ ಪ್ರದೇಶದಲ್ಲಿ ಈ ವರ್ಷ 120 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಮೂಲಕ ದೇಶದಲ್ಲಿಯೇ 2ನೇ ಸ್ಥಾನವನ್ನು ಪಡೆದುಕೊಂಡಿದೆ, ಉತ್ತರ ಪ್ರದೇಶ 84.25 ಲಕ್ಷ ಟನ್ ಸಕ್ಕರೆ ಉತ್ಪಾದನೆ ಮಾಡಿದೆ. ಈ ಪೈಕಿ 18 ಸಕ್ಕರೆ ಕಾರ್ಖಾನೆಗಳು ಈಗಾಗಲೆ ಹಂಗಾಮನ್ನು ಪೂರ್ಣಗೊಳಿಸಿವೆ. ಕಳೆದ ವರ್ಷ ಇದೇ ಅವಧಿಗೆ 87.16 ಲಕ್ಷ ಟನ್ ಸಕ್ಕರೆ ಉತ್ತರ ಪ್ರದೇಶದಲ್ಲಿ ಉತ್ಪಾದನೆಯಾಗಿತ್ತು.* ರಾಜ್ಯದಲ್ಲಿಯೇ ಸಕ್ಕರೆ ಉತ್ಪಾದನೆಯಲ್ಲಿ ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ನಂ.1 ಸ್ಥಾನದಲ್ಲಿದರೆ ಬಾಗಲಕೋಟೆ ಜಿಲ್ಲೆ ಸಕ್ಕರೆ ಉತ್ಪಾದನೆಯಲ್ಲಿ ದ್ವೀತಿಯ ಸ್ಥಾನ ಪಡೆದಿದೆ. * ಮುಧೋಳ ತಾಲೂಕು ಉತ್ತುರ ಗ್ರಾಮದಲ್ಲಿರುವ ಇಂಡಿಯನ್ ಕೇನ್ ಪಾವರ್ ಲಿ. ಕಾರ್ಖಾನೆಯೂ 19.90 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, 2.21ಲಕ್ಷ ಟನ್ ಸಕ್ಕರೆ ಉತ್ಪಾದಿಸುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ. ಬೆಳಗಾವಿ ಜಿಲ್ಲೆಯ ಅಥಣಿ ಶುಗರ್ಸ್ ಕಾರ್ಖಾನೆ 13.82 ಮೆಟ್ರಿಕ್ ಟನ್ ಕಬ್ಬು ನುರಿಸಿ, 1.58 ಲಕ್ಷ ಟನ್ ಸಕ್ಕರೆ ಉತ್ಪಾದಿಸಿ ದ್ವೀತಿಯ ಸ್ಥಾನದಲ್ಲಿದೆ.* ದೇಶದಲ್ಲಿ ಪ್ರಮುಖವಾಗಿ ಕಬ್ಬು ಬೆಳೆಯುವ ಮತ್ತು ಸಕ್ಕರೆ ಉತ್ಪಾದಿಸುವ ರಾಜ್ಯಗಳು : 1) ಉತ್ತರ ಪ್ರದೇಶ2) ಮಹಾರಾಷ್ಟ್ರ3) ಕರ್ನಾಟಕ4) ತಮಿಳುನಾಡು5) ಬಿಹಾರ6) ಗುಜರಾತ್7) ಹರಿಯಾಣ8) ಆಂಧ್ರ ಪ್ರದೇಶ9) ಪಂಜಾಬ್10) ಉತ್ತರಖಾಂಡ* ಪ್ರಪಂಚದಲ್ಲಿ ಪ್ರಮುಖವಾಗಿ ಕಬ್ಬು ಬೆಳೆಯುವ ಮತ್ತು ಸಕ್ಕರೆ ಉತ್ಪಾದಿಸುವ ದೇಶಗಳ ಪಟ್ಟಿ : 1 ಬ್ರೆಝಿಲ್ - 40%2 ಭಾರತ - 18%3 ಚೀನಾ - 6.5%4 ಥೈಲ್ಯಾಂಡ್ - 5.0%