* ರಸಾಯನ ವಿಜ್ಞಾನದ ಬೋಧ್ಯ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ ಹಿನ್ನೆಲೆಯಲ್ಲಿ ಗೋಕರ್ಣ ಮೂಲದ ನಾರಾಯಣ ಸದಾಶಿವ ಹೊಸಮನೆ ಅವರನ್ನು ಸ್ಕಾಲರ್ ಜಿಪಿಎಸ್ ಸಂಸ್ಥೆ ಉನ್ನತ ವಿದ್ವಾಂಸರೆಂದು ಗುರುತಿಸಿದೆ.* 2024ರ ಸ್ಕಾಲರ್ ಜಿಪಿಎಸ್ ರ್ಯಾಂಕಿಂಗ್ ಪ್ರಕಟಿಸಲಾಗಿದ್ದು, ನಾರಾಯಣ ಅವರ ಸಾಧನೆಗಳ ಆಧಾರದಲ್ಲಿ ಅವರಿಗೆ ಈ ಗೌರವ ಲಭಿಸಿದೆ ಎಂದು ಸಂಸ್ಥೆ ತಿಳಿಸಿದೆ.* ಅವರು ಪದವಿ ಶಿಕ್ಷಣವನ್ನು ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜಿನಲ್ಲಿ ಹಾಗೂ ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ.* ಎಡಿನ್ಬರ್ಗ್ನಲ್ಲಿ ಪಿಎಚ್ಡಿ ಮಾಡಿದ ಅವರು, ವಿವಿಧ ರಾಷ್ಟ್ರಗಳ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಅಧ್ಯಯನ ಹಾಗೂ ಸಂಶೋಧನೆ ನಡೆಸಿದ್ದಾರೆ.* ಅವರು ಅಮೆರಿಕದ ಎಡಿನ್ಬರ್ಗ್ ವಿಶ್ವವಿದ್ಯಾಲಯದ ಡೆಕಾಲ್ನ ಲೊಮಾ ಲಿಂಡಾ ವೈದ್ಯಕೀಯ ಕಾಲೇಜಿನಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.* ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೇರಿದಂತೆ 14 ವಿಶಾಲ ಕ್ಷೇತ್ರಗಳ 177 ವಿಷಯಗಳು ಹಾಗೂ 3.5 ಲಕ್ಷಕ್ಕೂ ಹೆಚ್ಚು ವಿಶೇಷತೆಗಳನ್ನು ಆಧಾರವಾಗಿಸಿಕೊಂಡು ಸ್ಕಾಲರ್ ಜಿಪಿಎಸ್ ಉನ್ನತ ವಿದ್ವಾಂಸರ ಪಟ್ಟಿ ಪ್ರಕಟಿಸುತ್ತದೆ.* 2023ರಲ್ಲಿ ಸ್ಥಾಪಿತವಾದ ಸ್ಕಾಲರ್ ಜಿಪಿಎಸ್ ಒಂದು ವಿದ್ವಪೂರ್ಣ ವಿಶ್ಲೇಷಣಾ ವೇದಿಕೆಯಾಗಿದ್ದು, ಇದರ ಪ್ರಧಾನ ಕಚೇರಿ ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್ನಲ್ಲಿ ಇದೆ. ಸಂಶೋಧನೆಯನ್ನು ಉತ್ತೇಜಿಸುವುದು ಮತ್ತು ತಜ್ಞರನ್ನು ಗುರುತಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.