* ಭಾರತೀಯ ಸ್ಪರ್ಧಾ ಆಯೋಗ(ಕಾಂಪಿಟಿಷನ್ ಕಮಿಷನ್ ಆಫ್ ಇಂಡಿಯಾ - ಸಿಸಿಐ) ಮೊದಲ ಪೂರ್ಣಾವಧಿ ಮಹಿಳಾ ಅಧ್ಯಕ್ಷರಾಗಿ ಹಿರಿಯ ಐಎಎಸ್ ಅಧಿಕಾರಿ ರವನೀತ್ ಕೌರ್ ಅವರನ್ನು ನೇಮಕ ಮಾಡಲಾಗಿದೆ.* 2009ರಲ್ಲಿ ಸ್ಥಾಪನೆಯಾದ ಸಿಸಿಐನ ಐದನೇ ಪೂರ್ಣಾವಧಿಯ ಅಧ್ಯಕ್ಷರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. 59 ವರ್ಷದ ರವನೀತ್ ಕೌರ್ ನೇಮಕಕ್ಕೆ ಕೇಂದ್ರ ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ* ಅಕ್ಟೋಬರ್ 2022 ರಲ್ಲಿ ಅಶೋಕ್ ಕುಮಾರ್ ಗುಪ್ತಾ ಅವರು ಸಿಸಿಐ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸಿದ ನಂತರ ಅವರ ಸ್ಥಾನಕ್ಕೆ ಪೂರ್ಣಾವಧಿ ಅಧ್ಯಕ್ಷರನ್ನು ನೇಮಕ ಮಾಡಿರಲಿಲ್ಲ