* ಸಿರಿಧಾನ್ಯಗಳ ಮಹತ್ವ ಕುರಿತು ಉತ್ತೇಜನ ನೀಡಲು, ಭಾರತ ಮೂಲದ ಅಮೆರಿಕನ್ ಗಾಯಕಿ, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತೆ ಫಲು ರವರು ರಚಿಸಿರುವ 'ಅಬುಂಡನ್ಸ್ ಇನ್' ಮಿಲೆಟ್ಸ್' ಎಂಬ ವಿಶೇಷ ಗೀತೆಗೆ ಪ್ರಧಾನಿ ನರೇಂದ್ರ ಮೋದಿ ಕೈ ಜೋಡಿಸಿದ್ದಾರೆ.* ಫಲು ಎಂದೇ ಪ್ರಸಿದ್ಧಿ ಪಡೆದಿರುವ ಮುಂಬೈ ಸಂಜಾತೆ ಗಾಯಕಿ, ಗೀತೆರಚನೆಗಾರ್ತಿ ಫಾಲ್ಗುಣಿ ಶಾ ಮತ್ತು ಆಕೆಯ ಪತಿ ಗಾಯಕ ಗೌರವ್ ಶಾ ರವರು ಈ ಗೀತೆ ರಚಿಸಲಾಗಿದ್ದು, ಹಲವಾರು ವೇದಿಕೆಗಳಲ್ಲಿ ಜೂನ್ 16ರಂದು ಗೀತೆ ಬಿಡುಗಡೆ ಮಾಡಲಾಯಿತ್ತು.* ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ರಚಿಸಲಾಗಿರುವ 'ಅಬುಂಡನ್ಸ್ ಇನ್' ಮಿಲೆಟ್ಸ್' ಎಂಬ ಗೀತೆಯು ಸಿರಿಧಾನ್ಯಗಳ ಮಹತ್ವವನ್ನು ಸಾರಲಿದ್ದು, ಪ್ರತಿಯೊಬ್ಬರಿಗೂ ತಲುಪುವಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.