* ಸಿಂಗಾಪುರದಲ್ಲಿ ಸೆಪ್ಟೆಂಬರ್ 1 ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ 66 ವರ್ಷ ವಯಸ್ಸಿನ ಅರ್ಥಶಾಸ್ತ್ರಜ್ಞ, ಮತ್ತು ಮಾಜಿ ಸಚಿವರು ಆಗಿರುವ ಥರ್ಮನ್ ಷಣ್ಮುಗರತ್ನಂ ಅವರು ಸಿಂಗಾಪುರದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.* 2011 ರಿಂದ 2019 ರವರೆಗೆ ಸಿಂಗಾಪುರದ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಥರ್ಮನ್ ಅವರು ಸಿಂಗಾಪುರದ ಮೂರನೇ ಭಾರತೀಯ ಮೂಲದ ಅಧ್ಯಕ್ಷರಾದರು.* ಚುನಾವಣಾ ಇಲಾಖೆಯ ಪ್ರಕಾರ, ಮಾಜಿ ಹಿರಿಯ ಸಚಿವರು ಥರ್ಮನ್ ಅವರು ಚಲಾವಣೆಯಾದ 2.48 ಮಿಲಿಯನ್ ಮತಗಳಲ್ಲಿ 70.4% (1,746,427 ಮತಗಳು) ಗಳಿಸಿದ್ದು, ಆದರೆ ಅವರ ಚೈನೀಸ್ ಮೂಲದ ಪ್ರತಿಸ್ಪರ್ಧಿಗಳಾದ ಕೊಕ್ ಸಾಂಗ್ ಮತ್ತು ತನ್ ಕಿನ್ ಲಿಯನ್ ಅವರು ಕ್ರಮವಾಗಿ 15.72% ಮತ್ತು 13.88% ಮತಗಳನ್ನು ಪಡೆದರು.* “ಸಿಂಗಪೋರಿಯನ್ನರು ಶ್ರೀ ಥರ್ಮನ್ ಷಣ್ಮುಗರತ್ನಂ ಅವರನ್ನು ನಿರ್ಣಾಯಕ ಅಂತರದಿಂದ ನಮ್ಮ ಮುಂದಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ರಾಷ್ಟ್ರದ ಮುಖ್ಯಸ್ಥರಾಗಿ, ಅವರು ದೇಶ ಮತ್ತು ವಿದೇಶಗಳಲ್ಲಿ ನಮ್ಮನ್ನು ಪ್ರತಿನಿಧಿಸುತ್ತಾರೆ ಮತ್ತು ಮೀಸಲು ಮತ್ತು ಪ್ರಮುಖ ನೇಮಕಾತಿಗಳನ್ನು ಒಳಗೊಂಡಂತೆ ಕಸ್ಟಡಿಯಲ್ ಅಧಿಕಾರವನ್ನು ಚಲಾಯಿಸುತ್ತಾರೆ, ”ಎಂದು ಪ್ರಧಾನಿ ಲೀ ಸೀನ್ ಲೂಂಗ್ ಅವರು ತಿಳಿಸಿದರು.