* ಪಾಕಿಸ್ತಾನ ಪ್ರೇರಿತ ಪಹಲ್ಗಾಮ್ ಉಗ್ರಕೃತ್ಯಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಮೇಲೆ ಕಠಿಣ ಕ್ರಮಗಳನ್ನು ಕೈಗೊಂಡಿದೆ ಇದರಲ್ಲಿ ಸಿಂಧೂ ನದಿ ಜಲ ಒಪ್ಪಂದ ರದ್ದು ಕೂಡ ಒಂದಾಗಿದೆ. ಪಹಲ್ಗಾಮ್ನಲ್ಲಿನ ಉಗ್ರರ ದಾಳಿ ಬಳಿಕ ಭಾರತ-ಪಾಕಿಸ್ತಾನ ಸಂಬಂಧ ಇನ್ನಷ್ಟು ಹದಗೆಡಿದ್ದು, ಭಾರತ ಐದು ಕಠಿಣ ಕ್ರಮಗಳಲ್ಲಿ ಸಿಂಧು ನದಿ ಒಪ್ಪಂದ ಅಮಾನತನ್ನು ಘೋಷಿಸಿದೆ.
ಒಪ್ಪಂದದ ಹಿನ್ನೆಲೆ:• 1960ರಲ್ಲಿ ಭಾರತ-ಪಾಕಿಸ್ತಾನ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.• ವಿಶ್ವ ಬ್ಯಾಂಕ್ ಸಹ ಸಾಂದರ್ಭಿಕ ಸಂಸ್ಥೆಯಾಗಿತ್ತು.• 9 ವರ್ಷಗಳ ಮಾತುಕತೆ ನಂತರ ಒಪ್ಪಂದ ಜಾರಿಗೆ ಬಂದಿತು.ಒಪ್ಪಂದದ ಮುಖ್ಯ ಅಂಶಗಳು:- ಪೂರ್ವ ನದಿಗಳ ನೀರನ್ನು ಭಾರತ ಬಳಸಿಕೊಳ್ಳಬಹುದು; ಪಶ್ಚಿಮ ನದಿಗಳ ಮೇಲೆ ಪಾಕಿಸ್ತಾನ ಹೆಚ್ಚು ಹಕ್ಕು ಹೊಂದಿದೆ.- ಭಾರತ ಪಶ್ಚಿಮ ನದಿಗಳ ಮೇಲೆ ಜಲವಿದ್ಯುತ್ ಯೋಜನೆಗಳನ್ನು ರೂಪಿಸಬಹುದು, ಆದರೆ ನದಿಯ ಹರಿವಿಗೆ ತೊಂದರೆಯಾಗದಿರಬೇಕು.- ಪಾಕಿಸ್ತಾನವು ಯೋಜನೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದು.- ಉಭಯ ದೇಶಗಳ ಆಯುಕ್ತರು ವರ್ಷಕ್ಕೊಮ್ಮೆ ಭೇಟಿಯಾಗಬೇಕಾದ ನಿಯಮವಿದೆ.- ತಾಂತ್ರಿಕ ಸಮಿತಿಯು ವಿವಾದಗಳನ್ನು ಪರಿಶೀಲಿಸುತ್ತದೆ.* ಶಾಂತಿ ಹಾಗೂ ಸಹಕಾರದ ಸಂಕೇತವಾದ ಈ ಒಪ್ಪಂದವು ಭಾರತ-ಪಾಕಿಸ್ತಾನ ನಡುವೆ ಒಗ್ಗಟ್ಟನ್ನು ತೋರಿಸುತ್ತಿತ್ತು. ಪಹಲ್ಗಾಮ್ ದಾಳಿಯ ಬಳಿಕ ಭಾರತ ಅಮಾನತುಗೊಳಿಸಿದ ಈ ಒಪ್ಪಂದ, ಪಾಕಿಸ್ತಾನದ ಪಾಲಿಗೆ ದೊಡ್ಡ ಆಘಾತವಾಗಿದೆ.* ಪಹಲ್ಗಾಮ್ ದಾಳಿ ರಾಜತಾಂತ್ರಿಕ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದು, ಮುಂದಿನ ದಿನಗಳಲ್ಲಿ ಗಂಭೀರ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ.