Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಸಿನಾ ರುಪ್ಪೆಂಥಾಲ್: 37 ಸೆಕೆಂಡುಗಳಲ್ಲಿ 10 ಪುರುಷರನ್ನು ಎತ್ತಿ ಎಸೆದು ವಿಶ್ವ ದಾಖಲೆ ನಿರ್ಮಿಸಿದ ಜರ್ಮನ್ ಶಕ್ತಿಶಾಲಿ ಮಹಿಳೆ!
Authored by:
Akshata Halli
Date:
18 ಮಾರ್ಚ್ 2026
➤
ದೈಹಿಕ ಶಕ್ತಿ ಮತ್ತು ವೇಗಕ್ಕೆ ಸಾಟಿಯಿಲ್ಲದ ಪ್ರದರ್ಶನ ನೀಡಿದ ಜರ್ಮನಿಯ ಶಕ್ತಿಶಾಲಿ ಮಹಿಳೆ (Strongwoman)
ಸಿನಾ ರುಪ್ಪೆಂಥಾಲ್ (Sina Ruppenthal)
, ಕೇವಲ
37.44 ಸೆಕೆಂಡುಗಳಲ್ಲಿ 10 ಪುರುಷರನ್ನು
ಒಬ್ಬೊಬ್ಬರಾಗಿ ಎತ್ತಿ ಬೆನ್ನಿನ ಮೇಲೆ ಹಾಕಿಕೊಂಡು ಎಸೆಯುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ (Guinness World Record) ನಿರ್ಮಿಸಿದ್ದಾರೆ. ಆಗಸ್ಟ್ 2025 ರಲ್ಲಿ ಮ್ಯೂನಿಚ್ನಲ್ಲಿ ನಡೆದ "ಡೈ ಗ್ರೋಬೆ ಶೋ ಡೆರ್ ವೆಲ್ಟ್ರೆಕಾರ್ಡ್ಸ್" (Die große Show der Weltrekorde) ಎಂಬ ದೂರದರ್ಶನ ಕಾರ್ಯಕ್ರಮದಲ್ಲಿ ಈ ಸಾಧನೆ ಮಾಡಲಾಗಿತ್ತು. ಇತ್ತೀಚೆಗೆ ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆಯು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದರ ವಿಡಿಯೋ ಹಂಚಿಕೊಂಡ ನಂತರ ಈ ಸುದ್ದಿ ಜಾಗತಿಕವಾಗಿ ವೈರಲ್ ಆಗಿದೆ.
➤
ಈ ದಾಖಲೆಯನ್ನು ನಿರ್ಮಿಸಲು ಕೇವಲ ದೈಹಿಕ ಬಲವಿದ್ದರೆ ಸಾಲದು. ಪ್ರತಿ ವ್ಯಕ್ತಿಯನ್ನು ಸುರಕ್ಷಿತವಾಗಿ ಎತ್ತಿ, ಸಮತೋಲನ ಕಾಯ್ದುಕೊಂಡು ನಿರ್ದಿಷ್ಟ ತಂತ್ರದೊಂದಿಗೆ ಎಸೆಯಬೇಕಾಗುತ್ತದೆ. ಸಿನಾ ಅವರು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಚಲಿಸುವಾಗ ತೋರಿದ ವೇಗ ಮತ್ತು ಅವರ ಸಮನ್ವಯ (Coordination) ವೀಕ್ಷಕರನ್ನು ಬೆರಗುಗೊಳಿಸಿದೆ. ಗಿನ್ನೆಸ್ ಅಧಿಕಾರಿಗಳ ಪ್ರಕಾರ, ಪ್ರತಿಯೊಬ್ಬ ಭಾಗವಹಿಸುವವರನ್ನು ಸುರಕ್ಷಿತವಾಗಿ ಎಸೆಯುವಲ್ಲಿ ಅವರು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಿದ್ದಾರೆ.
➤
ಸಿನಾ ರುಪ್ಪೆಂಥಾಲ್ ಕೇವಲ ಕ್ರೀಡಾಪಟುವಲ್ಲ, ಅವರು ಒಬ್ಬ ಕ್ರೀಡಾ ವಿಜ್ಞಾನಿ (Sports Scientist) ಕೂಡ ಹೌದು.
ಅವರು ವಿಶ್ವದ ಟಾಪ್ 5 ಅತ್ಯಂತ ಶಕ್ತಿಶಾಲಿ ನೈಸರ್ಗಿಕ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ.
ಜರ್ಮನಿಯ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಶಕ್ತಿ ಪ್ರದರ್ಶನ ದಾಖಲೆಗಳನ್ನು ಇವರ ಹೆಸರಿನಲ್ಲಿವೆ.
ಅವರ ಕ್ರೀಡಾ ವಿಜ್ಞಾನದ ಹಿನ್ನೆಲೆಯು ಅವರಿಗೆ ವೈಜ್ಞಾನಿಕ ತರಬೇತಿ ಮತ್ತು ಗಾಯಗಳಾಗದಂತೆ ತಂತ್ರಗಳನ್ನು ರೂಪಿಸಲು ಸಹಾಯ ಮಾಡುತ್ತದೆ.
➤
ಸ್ಟ್ರಾಂಗ್ವುಮನ್ (Strongwoman):
ಇದು ವೇಟ್ಲಿಫ್ಟಿಂಗ್ಗಿಂತ ಭಿನ್ನವಾಗಿದ್ದು, ಇಲ್ಲಿ ಭಾರವಾದ ವಸ್ತುಗಳನ್ನು ಎತ್ತುವುದು, ಎಳೆಯುವುದು ಮತ್ತು ಎಸೆಯುವಂತಹ ವಿವಿಧ ದೈಹಿಕ ಸವಾಲುಗಳಿರುತ್ತವೆ.
Take Quiz
Loading...