* ಸಿಕ್ಕಿಂ ರಾಜ್ಯದಲ್ಲಿ ಸರ್ಕಾರವು ತಮ್ಮ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ 1 ವರ್ಷ ಹೆರಿಗೆ ರಜೆ ಹಾಗೂ ಪುರುಷರಿಗೆ ಒಂದು ತಿಂಗಳ ಪೆಟರ್ನಿಟಿ ರಜೆಯನ್ನು ನೀಡಲಾಗುವುದು ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ಘೋಷಿಸಿದ್ದಾರೆ.* ಹೆರಿಗೆ ಪ್ರಯೋಜನ ಕಾಯಿದೆ 1961ರ ಪ್ರಕಾರ ಕೆಲಸ ಮಾಡುವ ಮಹಿಳೆಯು (Woman) 6 ತಿಂಗಳು ಅಥವಾ 26 ವಾರಗಳ ವೇತನ ಸಹಿತ ಹೆರಿಗೆ ರಜೆಗೆ ಅರ್ಹರಾಗಿದ್ದಾರೆ. * ಸಿಕ್ಕಿಂ ರಾಜ್ಯ ನಾಗರಿಕ ಸೇವಾ ಅಧಿಕಾರಿಗಳ ಸಂಘದ (ಎಸ್‌ಎಸ್‌ಸಿಎಸ್‌ಒಎ) ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಯೋಜನವನ್ನು ಒದಗಿಸಲು ಸೇವಾ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗುವುದು ಎಂದು ಹೇಳಿದರು.* ಮಗುವಿನ ಜನನದ ನಂತರ ಹೆರಿಗೆ ರಜೆ ನೀಡಲು ನಿರಾಕರಿಸಿದ ಜಿಲ್ಲಾ ಮೂಲ ಶಿಕ್ಷಣಾಧಿಕಾರಿ ಇಟಾ ಅವರ ಆದೇಶವನ್ನು ಕಾನೂನುಬಾಹಿರ ಎಂದು ಘೋಷಿಸಿದ ನ್ಯಾಯಾಲಯವು (Court) ಅದನ್ನು ರದ್ದುಗೊಳಿಸಿತು.* ಈ ಪ್ರಯೋಜನವು ಸರ್ಕಾರಿ ನೌಕರರು (Government employee) ತಮ್ಮ ಮಕ್ಕಳನ್ನು ಮತ್ತು ಕುಟುಂಬವನ್ನು ಉತ್ತಮವಾಗಿ ನೋಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಪ್ರೇಮ್ ಸಿಂಗ್ ತಮಾಂಗ್ ಅವರು ತಿಳಿಸಿದ್ದಾರೆ.