* ಸಿಖ್‌ ಧರ್ಮದ ಒಂಬತ್ತನೇ ಗುರುಗಳಾದ ಗುರು ತೇಜ್‌ ಬಹದ್ದೂರ್‌ ಜಿ ಅವರ ಹೆಸರನ್ನು ಅಮೆರಿಕಾದ ನ್ಯೂಯಾರ್ಕ್ ನಗರದ ಪ್ರಮುಖ ರಸ್ತೆಗೆ ಇಡುವ ಮೂಲಕ ಐತಿಹಾಸಿಕ ಗೌರವವನ್ನು ಸಲ್ಲಿಸಲಾಗಿದೆ.* ನ್ಯೂಯಾರ್ಕ್‌ ಸಿಟಿ ಕೌನ್ಸಿಲ್‌ನ ಪ್ರಕಾರ, ಗುರು ತೇಜ್‌ ಬಹದ್ದೂರ್‌ ಅವರ 'ತ್ಯಾಗ, ಕರುಣೆ ಹಾಗೂ ನ್ಯಾಯದ ಪರ ಅಚಲ ನಿಲುವನ್ನು' ಸ್ಮರಿಸುವ ಸಲುವಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.* ದೀಪಾವಳಿ ಹಬ್ಬದ ಮುನ್ನಾದಿನ ನಡೆದ ಮರುನಾಮಕರಣ ಕಾರ್ಯಕ್ರಮದ ನಂತರ, ರಿಚ್‌ಮಂಡ್‌ ಹಿಲ್‌ನ ಪ್ರಮುಖ ಸ್ಥಳಕ್ಕೆ ಗುರುಗಳ ಹೆಸರನ್ನು ಇಡಲಾಗಿದೆ.ಇನ್ನುಮುಂದೆ 'ಗುರು ತೇಜ್‌ ಬಹದ್ದೂರ್‌ ಜಿ ಮಾರ್ಗ' ಎಂದು ಕರೆಯಲಾಗುವುದು* ನ್ಯೂಯಾರ್ಕ್‌ ಸಿಟಿ ಕೌನ್ಸಿಲ್‌ನ ಸದಸ್ಯರಾದ ಲಿನ್‌ ಚುಲ್ಮನ್‌ ಅವರು ರಸ್ತೆಗೆ ಗುರು ತೇಜ್‌ ಬಹದ್ದೂರ್‌ ಅವರ ಹೆಸರನ್ನು ಮರುನಾಮಕರಣ ಮಾಡುವ ಕುರಿತ ನಿರ್ಣಯವನ್ನು ಮಂಡಿಸಿದ್ದರು.* ರಿಚ್‌ಮಂಡ್‌ ಹಿಲ್‌ ಪ್ರದೇಶದಲ್ಲಿ ನೆಲೆಸಿರುವ ಸಿಖ್‌ ಸಮುದಾಯದ ಮಹತ್ವವನ್ನು ಹಾಗೂ ನ್ಯೂಯಾರ್ಕ್‌ನ ಸಾಂಸ್ಕೃತಿಕ ರಚನೆಗೆ ಅವರು ನೀಡುತ್ತಿರುವ ಕೊಡುಗೆಯನ್ನು ಈ ಗೌರವವು ಎತ್ತಿ ತೋರಿಸುತ್ತದೆ ಎಂದು ಹರದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.