* ಸಿಖ್ ಸಮುದಾಯದ ಪ್ರತಿನಿಧಿಗಳು ಪವಿತ್ರ ಅವಶೇಷ ‘ಜೋರೆ ಸಾಹಿಬ್’ ಸಂರಕ್ಷಣೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.* ಪ್ರಧಾನಿ ಅವರು, ಇದು ಸಿಖ್ ಇತಿಹಾಸದೊಂದಿಗೆ ದೇಶದ ಸಾಂಸ್ಕೃತಿಕ ಪರಂಪರೆಯ ಭಾಗವೂ ಆಗಿದೆ ಎಂದು ಹೇಳಿದರು.* ‘ಜೋರೆ ಸಾಹಿಬ್’ ಎಂದರೆ ಗುರು ಗೋವಿಂದ್ ಸಿಂಗ್ ಹಾಗೂ ಅವರ ಪತ್ನಿ ಮಾತಾ ಸಾಹೀಬ್ ಕೌರ್ ಧರಿಸಿದ್ದ ಪಾದರಕ್ಷೆಗಳು. ಸಿಖ್ ಭಕ್ತರ ಪಾಲಿಗೆ ಇವು ನೇರ ದೈವೀ ಸಂಬಂಧ ಹೊಂದಿರುವ ಪವಿತ್ರ ಅವಶೇಷಗಳೆಂದು ನಂಬಿಕೆ.* ಪಂಜಾಬಿಯಲ್ಲಿ ‘ಜೋಡಾ’ ಎಂದರೆ ಚಪ್ಪಲಿ. ಇಂತಹ ಗುರುಗಳ ವೈಯಕ್ತಿಕ ವಸ್ತುಗಳು ಭಕ್ತರಲ್ಲಿ ಅಪಾರ ಭಾವನೆ ಉಂಟುಮಾಡುತ್ತವೆ.* ಅವುಗಳನ್ನು ವಿಭಿನ್ನ ಸ್ಥಳಗಳಲ್ಲಿ ದರ್ಶನಕ್ಕೆ ಇಡಲಾಗುತ್ತದೆ. ಗುರು ಗೋವಿಂದ್ ಸಿಂಗ್ ಖಾಲ್ಸಾ ಪಂಥ ಸ್ಥಾಪಿಸಿ ‘ಐದು ಕೆ’ಗಳ ಮೂಲಕ ಶಿಸ್ತನ್ನು ಬೋಧಿಸಿದ್ದರು.* ಈ ಪಾದರಕ್ಷೆಗಳು ದಿಲ್ಲಿಯ ಕರೋಲ್ ಬಾಗ್ನ ಪುರಿ ಕುಟುಂಬದ ಮನೆಯಲ್ಲಿ ಮೂರು ಶತಮಾನಗಳಿಂದ ಸಂರಕ್ಷಿತವಾಗಿವೆ. ಈಗ ಸರಕಾರ ಮತ್ತು ಸಿಖ್ ಸಮುದಾಯ ಒಟ್ಟಾಗಿ ಅವುಗಳ ಶ್ರೇಷ್ಠ ಸಂರಕ್ಷಣೆ ಮತ್ತು ಗೌರವಯುತ ಪ್ರದರ್ಶನದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.