* ಭಾರತದ ನವೋದ್ಯಮ ಪರಿಸರವನ್ನು ಉತ್ತೇಜಿಸಲು ಹಾಗೂ ಸ್ಥಾಪಿತ ಸಂಸ್ಥೆ ಮತ್ತು ಸ್ಟಾರ್ಟಪ್ಗಳಿಗೆ ಹೆಚ್ಚಿನ ನೆರವನ್ನು ಒದಗಿಸಲು, ಕೇಂದ್ರ ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ‘ಕ್ರೆಡಿಟ್ ಗ್ಯಾರಂಟಿ ಯೋಜನೆ’ (CGSS) ಅಡಿಯಲ್ಲಿ ನೀಡಬಹುದಾದ ಗರಿಷ್ಠ ಸಾಲದ ಮಿತಿಯನ್ನು ₹10 ಕೋಟಿ ರೂಪಾಯಿಯಿಂದ ₹20 ಕೋಟಿಗೆ ಹೆಚ್ಚಿಸಿದೆ.* ಸರ್ಕಾರ ಬಿಡುಗಡೆ ಮಾಡಿರುವ ಅಧಿಸೂಚನೆಯ ಪ್ರಕಾರ, ಈ ಹೆಚ್ಚುವರಿ ಸಾಲವಿಧಾನವು ನವೋದ್ಯಮಿಗಳಿಗೆ ಹೆಚ್ಚಿನ ಹಣಕಾಸು ರಕ್ಷಣೆ ಒದಗಿಸುತ್ತದೆ.* ಈ ಯೋಜನೆಯಡಿ ಇನ್ನಷ್ಟು ಹಣಕಾಸು ಸಂಸ್ಥೆಗಳನ್ನು ಸೇರಿಸಲಾಗುತ್ತಿದ್ದು, ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿಯಲ್ಲಿ ಗುರುತಿಸಲಾದ 27 ಉದ್ಯಮ ವಲಯಗಳಲ್ಲಿನ ನವೋದ್ಯಮಿಗಳಿಗೆ ವಾರ್ಷಿಕ ಗ್ಯಾರಂಟಿ ಶುಲ್ಕವನ್ನು ಶೇಕಡಾ 2ರಿಂದ ಶೇಕಡಾ 1ಕ್ಕೆ ಇಳಿಸಲಾಗಿದೆ.* 2022ರ ಅಕ್ಟೋಬರ್ನಲ್ಲಿ ಪ್ರಾರಂಭಗೊಂಡ ಈ ಯೋಜನೆಯಡಿ ಹಣಕಾಸೇತರ ಸಂಸ್ಥೆಗಳು ಹಾಗೂ ಸೆಬಿಯು ಮಾನ್ಯತೆ ಪಡೆದ ಸಂಸ್ಥೆಗಳು ನವೋದ್ಯಮಗಳಿಗೆ ಸಾಲವನ್ನು ಒದಗಿಸುತ್ತಿವೆ.* ಭಾರತದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (MSME) ಕ್ಷೇತ್ರವನ್ನು ಬಲಪಡಿಸುವ ದೃಷ್ಟಿಯಿಂದ ಸಿಜಿಎಸ್ಎಸ್ ಯೋಜನೆಯ ವಿಸ್ತರಣೆಯು ಮಹತ್ವದ ಹೆಜ್ಜೆಯಾಗಿದೆ.* ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಭಾರತದಲ್ಲಿ ಸುಮಾರು 5.93 ಕೋಟಿ ನೋಂದಾಯಿತ ಎಂಎಸ್ಎಂಇಗಳು ಕಾರ್ಯನಿರ್ವಹಿಸುತ್ತಿವೆ.