* ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಭಾರತದ ಎರಡನೇ ಅತೀ ಉದ್ದದ ಕೇಬಲ್-ಸ್ಟೇಡ್ ಸೇತುವೆ ಇಂದು ಲೋಕಾರ್ಪಣೆಗೊಂಡಿತು. ಈ ಸೇತುವೆಗೆ ‘ಸಿಗಂದೂರು ಚೌಡೇಶ್ವರಿ ದೇವಿ ಸೇತುವೆ’ ಎಂದು ಹೆಸರಿಡಲಾಗಿದೆ.* ಸೇತುವೆಯನ್ನು ಲೋಕಾರ್ಪಣೆಗೊಳಿಸಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, "ಭೂಮಿಪೂಜೆಯಿಂದ ಉದ್ಘಾಟನೆಯವರೆಗೆ ನಾನು ಭಾಗವಹಿಸಿದ್ದೇ ನನಗೆ ಸೌಭಾಗ್ಯ" ಎಂದು ಹೇಳಿದರು.* ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಂಸದ ಬಿವೈ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.* ಹೆಸರಿನ ಕುರಿತು ವಿವಾದ ಇದ್ದರೂ, ಸಂಸದ ರಾಘವೇಂದ್ರ ಅವರು ‘ಸಿಗಂದೂರು ಚೌಡೇಶ್ವರಿ’ ಎಂಬ ಹೆಸರನ್ನು ಶಿಫಾರಸು ಮಾಡಿದ್ದು, ಬಹುಜನರ ಭಾವನೆ ಹಾಗೂ ದೇವಿಯ ಕೃಪೆಯ ಆಧಾರವಾಗಿ ಈ ನಾಮಕರಣ ಮಾಡಲಾಗಿದೆ.