* ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದಲ್ಲಿ $20 ಬಿಲಿಯನ್ ಕ್ವಾಂಟಮ್ ಆರ್ಥಿಕತೆಯ ನಿರ್ಮಾಣಕ್ಕಾಗಿ "ಕರ್ನಾಟಕ ಕ್ವಾಂಟಮ್ ಮಿಷನ್ (KQM)" ಘೋಷಿಸಿದ್ದಾರೆ.* ಈ ಯೋಜನೆಗೆ ರೂ.1,000 ಕೋಟಿ ಮೀಸಲಿರಿಸಲಾಗಿದೆ. ಇದು "ಕರ್ನಾಟಕ ಕ್ವಾಂಟಮ್ ವಿಷನ್ 2035" ರ ಭಾಗವಾಗಿದೆ.* ಬೆಂಗಳೂರು ಐಐಎಸ್ಸಿ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ನಡೆದ "ಕ್ವಾಂಟಮ್ ಇಂಡಿಯಾ ಬೆಂಗಳೂರು" ಶೃಂಗಸಭೆಯಲ್ಲಿ ಸಿಎಂ ಭಾಗವಹಿಸಿದರು. 2035ರೊಳಗೆ 10,000 ಉನ್ನತ ಕೌಶಲ್ಯದ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಸರ್ಕಾರದದ್ದಾಗಿದೆ.* ಕರ್ನಾಟಕದ ಕ್ವಾಂಟಮ್ ತಂತ್ರಜ್ಞಾನ ಐದು ಪ್ರಮುಖ ಸ್ತಂಭಗಳಾದ – ಪ್ರತಿಭಾ ಅಭಿವೃದ್ಧಿ, ಸಂಶೋಧನೆ, ಮೂಲಸೌಕರ್ಯ, ಉದ್ಯಮ ಬೆಂಬಲ, ಜಾಗತಿಕ ಪಾಲುದಾರಿಕೆ – ಮೇಲೆ ಆಧಾರಿತವಾಗಿದೆ.* ರಾಜ್ಯವು 20 ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಕ್ವಾಂಟಮ್ ಕೌಶಲ್ಯ ತರಬೇತಿಯನ್ನು ಪರಿಚಯಿಸಲು ಹಾಗೂ ಪ್ರತಿವರ್ಷ 150 ಪಿಎಚ್ಡಿ ಫೆಲೋಶಿಪ್ಗಳನ್ನು ಬೆಂಬಲಿಸಲು ಯೋಜಿಸಿದೆ.* 1000-ಕ್ವಿಟ್ ಪ್ರೊಸೆಸರ್ಗಳಂತಹ ಅತ್ಯಾಧುನಿಕ ಕ್ವಾಂಟಮ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿ, ಆರೋಗ್ಯ, ರಕ್ಷಣಾ ಹಾಗೂ ಸೈಬರ್ ಭದ್ರತೆಯಲ್ಲಿ ಪೈಲಟ್ ಯೋಜನೆಗಳನ್ನು ನಡಿಸಲು ಗುರಿ ಹೊಂದಲಾಗಿದೆ.* ಭಾರತದ ಮೊದಲ ಕ್ವಾಂಟಮ್ ಹಾರ್ಡ್ವೇರ್ ಪಾರ್ಕ್, ನಾಲ್ಕು ಇನ್ನೋವೇಶನ್ ಝೋನ್ಗಳು ಹಾಗೂ ಫ್ಯಾಬ್ ಲೈನ್ ಸ್ಥಾಪನೆಯ ಮೂಲಕ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತದೆ.* ಬೆಂಗಳೂರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ನಾಯಕನಾದಂತೆ, ಕರ್ನಾಟಕದ Q-ಸಿಟಿಯೂ ಭಾರತವನ್ನು ಕ್ವಾಂಟಮ್ ತಂತ್ರಜ್ಞಾನದಲ್ಲಿ ಜಾಗತಿಕ ನಾಯಕನನ್ನಾಗಿಸಲಿದೆ ಎಂದು ಸಿಎಂ ಭರವಸೆ ನೀಡಿದರು.