* ಭಾರತ-ಯುಎಇ ರಕ್ಷಣಾ ಸಹಭಾಗಿತ್ವದ ಭಾಗವಾಗಿ, ಕಾರಾಕಲ್ ಮತ್ತು ಐಕಾಮ್ ಟೆಲಿ ಲಿಮಿಟೆಡ್ ಸೇರಿ ಸಿಆರ್ಪಿಎಫ್ಗೆ 200 ಸಿಎಸ್ಆರ್-338 ಸ್ಟೈಪರ್ ರೈಫಲ್ಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿವೆ.* ಈ ಶಸ್ತ್ರಾಸ್ತ್ರಗಳನ್ನು ಹೈದರಾಬಾದ್ನ ಐಕಾಮ್-ಕಾರಾಕಲ್ ಘಟಕದಲ್ಲಿ ತಯಾರಿಸಲಾಗುತ್ತಿದ್ದು, ಇದು ಭಾರತೀಯ ಸಶಸ್ತ್ರ ಪಡೆಗಳಿಗೆ ಪ್ರಮುಖ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿದೆ.* ಕಾರಾಕಲ್ ಸಿಇಒ ಹಮಾದ್ ಅಲಾಮೇರಿ ಈ ಯೋಜನೆಯನ್ನು 'ಮೇಕ್ ಇನ್ ಇಂಡಿಯಾ'ಗೆ ಬೆಂಬಲದ ಜೊತೆಗೆ ಭಾರತ-ಯುಎಇ ಸಹಭಾಗಿತ್ವದ ಮೈಲಿಗಲ್ಲು ಎಂದು ಹೇಳಿದ್ದಾರೆ.* ಐಕಾಮ್ ನಿರ್ದೇಶಕ ಸುಮಂತ್ ಪಾಟೂರು ಹರ್ಷ ಈ ಒಪ್ಪಂದವು ಗುಣಮಟ್ಟದ ಉದ್ಯೋಗ ಸೃಷ್ಟಿಸಿ ಭಾರತದ ರಕ್ಷಣಾ ಕೈಗಾರಿಕೆಗೆ ಬಲ ನೀಡುತ್ತದೆ ಎಂದಿದ್ದಾರೆ.* ಸಿಎಸ್ಆರ್-338 ರೈಫಲ್ಗಳನ್ನು 2025ರ ನಾಲ್ಕನೇ ತ್ರೈಮಾಸಿಕದಲ್ಲಿ ಪೂರೈಸಲಾಗುತ್ತಿದ್ದು, 338 ಲಾಪುವಾ ಮ್ಯಾಗ್ನಮ್ ಚೇಂಬರ್, 27 ಇಂಚಿನ ಬ್ಯಾರೆಲ್, 10 ರೌಂಡ್ ಮ್ಯಾಗಜೀನ್ ಮತ್ತು ಆಧುನಿಕ ಟೆಲಿಸ್ಕೋಪ್ ಹೊಂದಿರಲಿದೆ.