* ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ್ ಇಂದು "ಸಿ-ಫ್ಲಡ್" ಎಂಬ ಏಕೀಕೃತ ಜಲಾವೃತ ಪೂರ್ವಾನುಮಾನ ವ್ಯವಸ್ಥೆಯನ್ನು ಉದ್ಘಾಟಿಸಿದರು. ಈ ಯೋಜನೆಯನ್ನು ಪುಣೆಯ ಸಿ-ಡ್ಯಾಕ್ ಮತ್ತು ಕೇಂದ್ರ ಜಲ ಆಯೋಗ (CWC) ಸಹಕಾರದಿಂದ ಅಭಿವೃದ್ಧಿಪಡಿಸಲಾಗಿದೆ.* ಸಿ-ಫ್ಲಡ್ ಒಂದು ವೆಬ್ ಆಧಾರಿತ ವೇದಿಕೆಯಾಗಿದ್ದು, ಎರಡು ದಿನಗಳ ಮುಂಚಿತವಾಗಿ ಗ್ರಾಮ ಮಟ್ಟದವರೆಗೆ ಜಲಾವೃತ ಭೂಪಟ ಮತ್ತು ನೀರಿನ ಮಟ್ಟದ ಪೂರ್ವಾನುಮಾನ ಒದಗಿಸುತ್ತದೆ.* ಇದರಿಂದ ವಿಪತ್ತು ನಿರ್ವಹಣಾಧಿಕಾರಿಗಳಿಗೆ ಸುಲಭ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ.* ಈ ವ್ಯವಸ್ಥೆಯ ಪ್ರಸ್ತುತ ವ್ಯಾಪ್ತಿ ಮಹಾನದಿ, ಗೋದಾವರಿ ಮತ್ತು ತಾಪಿ ನದೀ ಕುಹರಗಳಿಗೆ ಸೀಮಿತವಾಗಿದ್ದು, ಭವಿಷ್ಯದಲ್ಲಿ ಇನ್ನು ಹೆಚ್ಚಿನ ನದೀ ಪ್ರದೇಶಗಳನ್ನು ಸೇರಿಸಲಾಗುತ್ತದೆ. ಈ ಮಾದರಿಯೀಕರಣಕ್ಕಾಗಿ ಹೈಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (HPC) ಸೌಲಭ್ಯಗಳನ್ನು ಬಳಸಲಾಗುತ್ತದೆ.* ಸಮಾರಂಭದಲ್ಲಿ ಸಚಿವರು ಸಾರ್ವಜನಿಕ ಜಾಗೃತಿ, ಸಿದ್ಧತೆ ಹೆಚ್ಚಿಸುವಂತೆ, ಎಲ್ಲಾ ನದೀ ಕುಹರಗಳ ಅಧ್ಯಯನಕ್ಕೆ ಯೋಜನೆ ತಯಾರಿಸುವಂತೆ ಮತ್ತು ಈ ಪೂರ್ವಾನುಮಾನಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪೋರ್ಟಲ್ಗೆ ತಕ್ಷಣ ಏಕೀಕರಿಸುವಂತೆ ಸೂಚಿಸಿದರು.* ಅಂತಿಮವಾಗಿ, ಸಚಿವರು ಈ ಯಶಸ್ವಿ ಪ್ರಯತ್ನಕ್ಕಾಗಿ ಸಿ-ಡ್ಯಾಕ್, CWC ಮತ್ತು ಎನ್ಆರ್ಎಸ್ಸಿ ತಂಡವನ್ನು ಅಭಿನಂದಿಸಿದರು ಮತ್ತು ಸರ್ಕಾರದ ವಿಪತ್ತು ನಿರ್ವಹಣಾ ಬದ್ಧತೆಯನ್ನು ಪುನರುಚ್ಚರಿಸಿದರು.