Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಶೂನ್ಯ ತ್ಯಾಜ್ಯ ಗುರಿಯತ್ತ ಹೆಜ್ಜೆ: ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಪರಿಸರ ನಿಯಮಗಳು–2026
Authored by:
Akshata Halli
Date:
29 ಜನವರಿ 2026
➤ ಕೇಂದ್ರ ಪರಿಸರ ಸಚಿವಾಲಯವು 2016ರ ಹಳೆಯ ನಿಯಮಗಳನ್ನು ರದ್ದುಗೊಳಿಸಿ, ಹೆಚ್ಚು ತಾಂತ್ರಿಕ ಮತ್ತು ಜವಾಬ್ದಾರಿಯುತವಾದ 2026ರ ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಹೊಸ ನಿಯಮಗಳು
ಏಪ್ರಿಲ್ 1, 2026
ರಿಂದ ಜಾರಿಗೆ ಬರಲಿವೆ. ಇದರ ಮುಖ್ಯ ಉದ್ದೇಶ
'ಶೂನ್ಯ ತ್ಯಾಜ್ಯ' (Zero Waste)
ಗುರಿ ತಲುಪುವುದು ಮತ್ತು
'ವೃತ್ತಾಕಾರದ ಆರ್ಥಿಕತೆ' (Circular Economy)
ಗೆ ಉತ್ತೇಜನ ನೀಡುವುದಾಗಿದೆ.
➤
'ಮಾಲಿನ್ಯಕಾರಕವೇ ಪಾವತಿಸಲಿ' (Polluter Pays Principle) :
ಈ ತತ್ವದ ಅಡಿಯಲ್ಲಿ, ಯಾರು ಪರಿಸರವನ್ನು ಕಲುಷಿತಗೊಳಿಸುತ್ತಾರೋ ಅಥವಾ ನಿಯಮಗಳನ್ನು ಉಲ್ಲಂಘಿಸುತ್ತಾರೋ ಅವರೇ ಅದರ ಶುದ್ಧೀಕರಣದ ವೆಚ್ಚವನ್ನು ಭರಿಸಬೇಕು. ತಪ್ಪು ಮಾಹಿತಿ ನೀಡುವುದು, ನೋಂದಣಿ ಇಲ್ಲದೆ ತ್ಯಾಜ್ಯ ಘಟಕ ನಡೆಸುವುದು ಅಥವಾ ತ್ಯಾಜ್ಯ ವಿಂಗಡಣೆ ಮಾಡದಿದ್ದಲ್ಲಿ 'ಪರಿಸರ ಪರಿಹಾರ' (Environmental Compensation) ರೂಪದಲ್ಲಿ ದಂಡ ವಿಧಿಸಲಾಗುತ್ತದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು (SPCB) ಈ ದಂಡವನ್ನು ವಿಧಿಸುವ ಅಧಿಕಾರ ಹೊಂದಿವೆ.
➤
ನಾಲ್ಕು ಹಂತದ ಕಡ್ಡಾಯ ವಿಂಗಡಣೆ:
ಈ ಹಿಂದೆ ಕೇವಲ ಹಸಿ ಮತ್ತು ಒಣ ತ್ಯಾಜ್ಯಕ್ಕೆ ಪ್ರಾಮುಖ್ಯತೆ ಇತ್ತು. ಆದರೆ ಹೊಸ ನಿಯಮದಂತೆ ಪ್ರತಿಯೊಬ್ಬ ನಾಗರಿಕರು ತ್ಯಾಜ್ಯವನ್ನು ಈ ಕೆಳಗಿನಂತೆ ನಾಲ್ಕು ಭಾಗಗಳಾಗಿ ವಿಂಗಡಿಸಬೇಕು:
1.
ಹಸಿ ತ್ಯಾಜ್ಯ (Wet Waste):
ಜೈವಿಕವಾಗಿ ಕೊಳೆಯುವ ಪದಾರ್ಥಗಳು (ಗೊಬ್ಬರ ಅಥವಾ ಬಯೋ-ಗ್ಯಾಸ್ ತಯಾರಿಕೆಗೆ).
2.
ಒಣ ತ್ಯಾಜ್ಯ (Dry Waste):
ಮರುಬಳಕೆ ಮಾಡಬಹುದಾದ ವಸ್ತುಗಳು (ಪ್ಲಾಸ್ಟಿಕ್, ಲೋಹ, ಕಾಗದ).
3.
ನೈರ್ಮಲ್ಯ ತ್ಯಾಜ್ಯ (Sanitary Waste):
ಪರಿಸರಕ್ಕೆ ಹಾನಿಕಾರಕವಾದ ಮತ್ತು ಸೋಂಕು ಹರಡುವ ಸಾಮಗ್ರಿಗಳು (ಸ್ಯಾನಿಟರಿ ಪ್ಯಾಡ್, ಡೈಪರ್ ಇತ್ಯಾದಿ). ಇವುಗಳನ್ನು ಪ್ರತ್ಯೇಕವಾಗಿ ಪೇಪರ್ನಲ್ಲಿ ಸುತ್ತಿ ನೀಡಬೇಕು.
4.
ವಿಶೇಷ ಕಾಳಜಿ ತ್ಯಾಜ್ಯ (Special Care Waste):
ಅಪಾಯಕಾರಿ ಗೃಹಬಳಕೆ ವಸ್ತುಗಳು (ಬ್ಯಾಟರಿ, ಪೇಂಟ್, ಔಷಧಿ, ಥರ್ಮಾಮೀಟರ್).
➤
ಬೃಹತ್ ತ್ಯಾಜ್ಯ ಉತ್ಪಾದಕರ :
ಯಾರು ದಿನಕ್ಕೆ 100 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುತ್ತಾರೋ ಅಥವಾ 20,000 ಚದರ ಮೀಟರ್ಗಿಂತ ಹೆಚ್ಚು ವಿಸ್ತೀರ್ಣ ಹೊಂದಿದ್ದಾರೋ ಅವರನ್ನು 'ಬೃಹತ್ ತ್ಯಾಜ್ಯ ಉತ್ಪಾದಕರು' ಎಂದು ಪರಿಗಣಿಸಲಾಗುತ್ತದೆ. ಇವರು ತಮ್ಮ ತ್ಯಾಜ್ಯವನ್ನು ತಾವೇ ಸಂಸ್ಕರಿಸುವುದು ಅಥವಾ 'ವಿಸ್ತೃತ ಬೃಹತ್ ತ್ಯಾಜ್ಯ ಉತ್ಪಾದಕರ ಜವಾಬ್ದಾರಿ' (EBWGR) ಅಡಿಯಲ್ಲಿ ಪ್ರಮಾಣಪತ್ರ ಪಡೆಯುವುದು ಕಡ್ಡಾಯ.
➤
ಆನ್ಲೈನ್ ಟ್ರ್ಯಾಕಿಂಗ್ ಮತ್ತು ಪೋರ್ಟಲ್:
ತ್ಯಾಜ್ಯ ಸಂಗ್ರಹಣೆಯಿಂದ ಹಿಡಿದು ವಿಲೇವಾರಿಯವರೆಗೆ ಪ್ರತಿಯೊಂದು ಹಂತವನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಒಂದು
ಕೇಂದ್ರೀಕೃತ ಆನ್ಲೈನ್ ಪೋರ್ಟಲ್
ಅನ್ನು ಅಭಿವೃದ್ಧಿಪಡಿಸಲಿದೆ.
➤
ಪರಿಸರ ಪರಿಹಾರ (Environmental Compensation):
ನಿಯಮ ಉಲ್ಲಂಘಿಸುವವರಿಗೆ, ಸುಳ್ಳು ಮಾಹಿತಿ ನೀಡುವವರಿಗೆ ಅಥವಾ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವವರಿಗೆ ಭಾರಿ ದಂಡ ವಿಧಿಸಲು ಅವಕಾಶ ನೀಡಲಾಗಿದೆ.
ಗುಡ್ಡಗಾಡು ಪ್ರದೇಶ ಮತ್ತು ದ್ವೀಪಗಳಿಗೆ ವಿಶೇಷ ನಿಯಮ:
ಪ್ರವಾಸಿಗರಿಂದ ಹೆಚ್ಚಿನ ತ್ಯಾಜ್ಯ ಉತ್ಪತ್ತಿಯಾಗುವ ಹಿನ್ನೆಲೆಯಲ್ಲಿ, ಸ್ಥಳೀಯ ಸಂಸ್ಥೆಗಳು ಪ್ರವಾಸಿಗರಿಗೆ
'ಬಳಕೆದಾರರ ಶುಲ್ಕ' (User Fee)
ವಿಧಿಸಲು ಈ ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ.
➤
RDF ಬಳಕೆ ಕಡ್ಡಾಯ:
ಕೈಗಾರಿಕೆಗಳು ಮತ್ತು ಸಿಮೆಂಟ್ ಕಾರ್ಖಾನೆಗಳು ತಾವು ಬಳಸುವ ಇಂಧನದಲ್ಲಿ ಶೇ. 5 ರಿಂದ ಶೇ. 15 ರಷ್ಟು
RDF (Refuse Derived Fuel)
ಅನ್ನು ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ.
Take Quiz
Loading...