* ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯುವ ಆಕ್ಸಿಯಮ್–4 ಕಾರ್ಯಾಚರಣೆಯ ಉಡಾವಣೆಯನ್ನು ನಾಸಾ ಮತ್ತೊಮ್ಮೆ ಮುಂದೂಡಿದೆ.* ಮುಂಬರುವ ದಿನಗಳಲ್ಲಿ ಹೊಸ ಉಡಾವಣಾ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಎಂದು ಆಕ್ಸಿಯಮ್ ಸ್ಪೇಸ್ ಹೇಳಿದೆ. * ಜ್ವೆಜ್ಡಾ ಸರವಿಸ್ ಮಾಡ್ಯೂಲ್ನಲ್ಲಿ ನಡೆದ ದುರಸ್ತಿ ಕಾರ್ಯಗಳ ನಂತರ ಬಾಹ್ಯಾಕಾಶ ನಿಲ್ದಾಣದ ಸ್ಥಿತಿಗತಿಯ ಮೌಲ್ಯಮಾಪನಕ್ಕಾಗಿ ಹೆಚ್ಚಿನ ಸಮಯ ಬೇಕಾಗಿದೆ.* ಮೊದಲು ಜೂನ್ 11 ರಂದು ಉಡಾವಣೆಯಾಗಬೇಕಿತ್ತು, ಆದರೆ ಫಾಲ್ಕನ್-9 ರಾಕೆಟ್ನಲ್ಲಿ ಇಂಧನ ಸೋರಿಕೆಯು ಕಂಡುಬಂದ ಹಿನ್ನೆಲೆಯಲ್ಲಿ ಉಡಾವಣೆ ರದ್ದು ಮಾಡಲಾಯಿತು. ನಂತರ ದಿನಾಂಕ ಜೂನ್ 22ಕ್ಕೆ ಸರಿಸಲಾಗಿದೆ, ಆದರೆ ಈಗ ಮತ್ತೊಮ್ಮೆ ಮುಂದೂಡಲಾಗಿದೆ.* ಈ ಕಾರ್ಯಾಚರಣೆಯಲ್ಲಿ ಪೆಗ್ಗಿ ವಿಟ್ಸನ್ ಕಮಾಂಡರ್ ಆಗಿ, ಶುಭಾಂಶು ಶುಕ್ಲಾ ಪೈಲಟ್ ಆಗಿ ಮತ್ತು ಟಿಬೋರ್ ಕಾಪು (ಹಂಗೇರಿ) ಮತ್ತು ಸ್ಲಾವೋಸ್ಜ್ ಉಜ್ನಾಮ್ಸ್ಕಿ-ವಿಸ್ನಿವಿಸ್ಕಿ (ಪೋಲೆಂಡ್) ತಜ್ಞರಾಗಿ ಪಾಲ್ಗೊಳ್ಳುತ್ತಿದ್ದಾರೆ.