* ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್ಎಸ್)ಕ್ಕೆ ಕರೆದೊಯ್ಯಲಿದ್ದ ಆಕ್ಸಿಯೋಂ-4 ಮಿಷನ್ ಮತ್ತೆ ಮುಂದೂಡಿಕೆಯಾಗಿದೆ.* ನಭಕ್ಕೆ ಜಿಗಿಯಲಿದ್ದ ಸ್ಪೇಸ್ಎಕ್ಸ್ನ ಫಾಲ್ಕನ್-9 ರಾಕೆಟ್ನಲ್ಲಿ ಸೋರಿಕೆ ಕಂಡುಬಂದಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಇದರಿಂದ, 41 ವರ್ಷಗಳ ಬಳಿಕ ಭಾರತೀಯನನ್ನು ಅಂತರಿಕ್ಷದಲ್ಲಿ ಹಾಗೂ ಮೊದಲ ಬಾರಿ ಐಎಸ್ಎಸ್ನಲ್ಲಿ ಕಾಣುವ ಕನಸಿಗೆ ಅಲ್ಪವಿರಾಮ ಬಿದ್ದಿದೆ.* ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸ್ಪೇಸ್ಎಕ್ಸ್, ‘ರಾಕೆಟ್ನ ಬೂಸ್ಟರ್ನಲ್ಲಿ ದ್ರವರೂಪದ ಆಮ್ಲಜನಕ ಸೋರಿಕೆಯಾಗುತ್ತಿರುವುದು ಕಂಡುಬಂದಿರುವ ಕಾರಣ, ಅದರ ರಿಪೇರಿಗಾಗಿ ಉಡಾವಣೆಯನ್ನು ತಡೆಹಿಡಿಯಲಾಗಿದೆ.* ಈ ಕಾರ್ಯ ಪೂರ್ಣವಾಗುತ್ತಿದ್ದಂತೆ ಉಡ್ಡಯನದ ಹೊಸ ದಿನಾಂಕವನ್ನು ಘೋಷಿಸುತ್ತೇವೆ’ ಎಂದು ತಿಳಿಸಿದೆ.