* ನಕ್ಸಲ್ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಆರು ಮಂದಿ ಬುಧವಾರ (ಜನವರಿ.08) ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿ. ಪರಮೇಶ್ವರ ಸಮ್ಮುಖದಲ್ಲಿ ಶರಣಾಗಿದ್ದಾರೆ.* ಲತಾ, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ಸುಂದರಿ ಕೂತ್ಲುರು, ವಸಂತ್ ಕೆ., ಟಿ.ಎನ್ ಜಿಷಾ ಅವರುಗಳು ಶರಣಾದ್ದಾರೆ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಶರಣಾಗತಿ ಪ್ರಕ್ರಿಯೆಗಳು ನಡೆದವು.* ಮುಖ್ಯಮಂತ್ರಿ ಸಿದ್ದರಾಮಯ್ಯ ನಕ್ಸಲ್ ಚಳವಳಿ ತೊರೆದವರಿಗೆ ಸಂವಿಧಾನದ ಪ್ರತಿ ನೀಡಿದ್ದು, ಸಶಸ್ತ್ರ ಹೋರಾಟ ತೊರೆದವರ ಮೇಲಿನ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು ಮತ್ತು ತ್ವರಿತ ಇತ್ಯರ್ಥದ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವುದಾಗಿ ಹೇಳಿದರು.* ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಮೊದಲ ಅವಧಿಯಲ್ಲಿ ನಕ್ಸಲರ ಮನವೊಲಿಸಲು ಪ್ರಾರಂಭಿಸಿದ ಪ್ರಯತ್ನದ ಫಲವಾಗಿ, ಕಳೆದ ಅವಧಿಯಲ್ಲಿ 12 ನಕ್ಸಲರು ಶರಣಾಗಿದ್ದರು. ಈಗ ಆರು ಮಂದಿ ನಕ್ಸಲರು ಶರಣಾಗಿ, ಕರ್ನಾಟಕ ನಕ್ಸಲ್ಮುಕ್ತ ರಾಜ್ಯವಾಗಲು ಹೆಜ್ಜೆ ಇಟ್ಟಿದೆ ಎಂದು ತಿಳಿಸಿದ್ದಾರೆ.* ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಮುಖ್ಯವಾಹಿನಿಗೆ ಬಂದ ನಕ್ಸಲರಿಗೆ ತಲಾ ₹3 ಲಕ್ಷ ಪ್ರೋತ್ಸಾಹಧನ (ಮೊದಲ ಕಂತು) ಮಂಜೂರು ಮಾಡುವಂತೆ ಆದೇಶಿಸಿದ್ದಾರೆ.* ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಆರೋಲಿ ಅವರು ‘ಎ’ ವರ್ಗದಲ್ಲಿದ್ದು, ಅವರಿಗೆ ಒಟ್ಟು ತಲಾ ₹7.50 ಲಕ್ಷ, ಹೊರ ರಾಜ್ಯದವರಾದ ಕೆ.ವಸಂತ ಮತ್ತು ಜಿಷಾ ಅವರಿಗೆ ತಲಾ ₹4 ಲಕ್ಷ ಪ್ರೋತ್ಸಾಹಧನ ಸಿಗಲಿದೆ.