* ಶ್ರೀಲಂಕಾದ ಮಾಜಿ ದೇಶೀಯ ಕ್ರಿಕೆಟಿಗ ಸಾಲಿಯಾ ಸಮನ್ ಅವರನ್ನು ಐಸಿಸಿ ಭ್ರಷ್ಟಾಚಾರ ವಿರೋಧಿ ನ್ಯಾಯಮಂಡಳಿಯು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಐದು ವರ್ಷಗಳ ಕಾಲ ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿಷೇಧಿಸಲಾಗಿದೆ.* 2021ರ ಅಬುಧಾಬಿ ಟಿ-10 ಪಂದ್ಯಾವಳಿ ವೇಳೆ ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗವಹಿಸುವಂತೆ ತಂಡದ ಆಟಗಾರರಿಗೆ ಹಣ ಮತ್ತು ಬಹುಮಾನಗಳನ್ನು ಹಂಚಿಕೆ ಮಾಡಿದ್ದರು ಎಂದು ಎಂಟು ಆಟಗಾರರ ವಿರುದ್ಧ ಆರೋಪ ಕೇಳಿ ಬಂದಿತ್ತು. ಇದರಲ್ಲಿ 39 ವರ್ಷದ ಸಲಿಯಾ ಸಮನ್ ಕೂಡ ಒಬ್ಬರಾಗಿದ್ದಾರೆ.* ಆಗಸ್ಟ್ 15 ಶುಕ್ರವಾರದಂದು ಐಸಿಸಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ನಿಷೇಧವು ಸೆಪ್ಟೆಂಬರ್ 13, 2023 ರಿಂದ ಜಾರಿಗೆ ಬರಲಿದೆ. 2023ರಲ್ಲಿ ಸಲಿಯಾ ಸಮನ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. * ಇದೀಗ ಪೂರ್ಣ ವಿಚಾರಣೆಯ ನಂತರ ಆರ್ಟಿಕಲ್ 2.1.1ರ ಅಡಿ ತಪ್ಪಿತಸ್ಥರೆಂದು ಘೋಷಿಸಲಾಗಿದೆ. ಇದು ಕ್ರಿಕೆಟ್ ಪಂದ್ಯದ ವೇಳೆ ಫಿಕ್ಸಿಂಗ್ನಲ್ಲಿ ಭಾಗವಹಿಸುವುದು ಅಥವಾ ಪಂದ್ಯಗಳ ಫಲಿತಾಂಶದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವುದರ ಭಾಗವಾಗಿದೆ.