* ‘ದ್ವಿತಾ’ ಚಂಡಮಾರುತದಿಂದಾಗಿ ತತ್ತರಿಸಿರುವ ಶ್ರೀಲಂಕಾದಲ್ಲಿ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ತರುವ ಕಾರ್ಯಾಚರಣೆಯನ್ನು ಭಾರತ ‘ಸಾಗರಬಂಧು’ ಎಂಬ ಹೆಸರಿನಲ್ಲಿ ಕೈಗೊಂಡಿದೆ. ಈ ಕಾರ್ಯಾಚರಣೆಯಲ್ಲಿ 104 ಭಾರತೀಯರನ್ನು ವಾಯುಪಡೆಯ ವಿಶೇಷ ಯುದ್ಧವಿಮಾನ ಬಳಸಿ ಕೊಲಂಬೊದ ಬಂಡಾರನಾಯಿಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಿರುವನಂತಪುರಕ್ಕೆ ಕರೆತರಲಾಗಿದೆ ಎಂದು ಭಾರತದ ಹೈಕಮಿಷನ್ ಮಾಹಿತಿ ನೀಡಿದೆ. * ಭಾರತವು ಕೇವಲ ನಾಗರಿಕರನ್ನು ರಕ್ಷಿಸುವಷ್ಟರಲ್ಲದೆ, ಶ್ರೀಲಂಕಾದಲ್ಲಿ ನಡೆಯುತ್ತಿರುವ ರಕ್ಷಣಾ ಮತ್ತು ನೆರವು ಕಾರ್ಯಾಚರಣೆಗೂ ತನ್ನ ಸಹಕಾರವನ್ನು ವಿಸ್ತರಿಸಿದೆ.-ಭಾರತೀಯ ವಾಯುಪಡೆಯ ಚೇತಕ್ ಹೆಲಿಕಾಪ್ಟರ್‌ಗಳು ಪ್ರವಾಹ ಮತ್ತು ಭೂಕುಸಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿವೆ.- ರಸ್ತೆ ಸಂಪರ್ಕ ಕಡಿತಗೊಂಡಿರುವ ಕೊಟ್‌ಮಲೆ ಗುಡ್ಡಪ್ರದೇಶದಲ್ಲೂ ರಕ್ಷಣಾ ಕಾರ್ಯ ಜೋರಾಗಿದೆ.- ಭಾರತದಿಂದ ಕಳುಹಿಸಲಾದ ಎನ್‌ಡಿಆರ್‌ಎಫ್ ತಂಡ ಕೊಲಂಬೊ ಹಾಗೂ ಕೋಚಿಕಡೆ ಭಾಗದಲ್ಲಿ ಕಾರ್ಯಪ್ರವೃತ್ತವಾಗಿದೆ. ನೆರವು ನೀಡುವ ಸಂದರ್ಭದಲ್ಲೇ ದುರ್ಘಟನೆ ಸಂಭವಿಸಿದೆ: ಶ್ರೀಲಂಕಾದ ವೆನ್ನಪ್ಪುವ ಕರಾವಳಿಯಲ್ಲಿ ಪರಿಹಾರ ಸಾಮಗ್ರಿಗಳನ್ನು ತಲುಪಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿದ್ದು, ಒಬ್ಬ ಪೈಲಟ್ ಮೃತಪಟ್ಟಿದ್ದು ಐವರ ಸ್ಥಿತಿ ಗಂಭೀರವಾಗಿದೆ. ಇದೆ ವೇಳೆ, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಶ್ರೀಲಂಕಾ ನೌಕಾಪಡೆಯ ಐವರು ನಾವಿಕರ ಮೃತದೇಹಗಳೂ ಪತ್ತೆಯಾಗಿವೆ.* ಇಂಡೋನೇಷ್ಯಾ – ಪ್ರವಾಹ ಮತ್ತು ಭೂಕುಸಿತ ಬಾಲೆಗೆ ಬಲಿಯಾದ ಜನರು : ಭಾರೀ ಮಳೆ ಮತ್ತು ಭೂಕುಸಿತಗಳಿಂದಾಗಿ ಇಂಡೋನೇಷ್ಯಾದಲ್ಲಿ ಉಂಟಾದ ನಾಶನ ಭೀಕರ ಮಟ್ಟದಲ್ಲಿದೆ.* ಮೃತರ ಸಂಖ್ಯೆ 593ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಈ ದುರಂತದಲ್ಲಿ: 468 ಜನರು ನಾಪತ್ತೆಯಾಗಿದ್ದಾರೆ,  5,78,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.  ಹಲವು ಪ್ರದೇಶಗಳಲ್ಲಿ ರಸ್ತೆ, ಸೇತುವೆ ಮತ್ತು ಮನೆಗಳು ಜಲಾವೃತವಾಗಿದ್ದು ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ. * ಇದು ಇಂಡೋನೇಷ್ಯಾದ ಇತ್ತೀಚಿನ ಇತಿಹಾಸದಲ್ಲಿನ ದೊಡ್ಡ ಪ್ರವಾಹ–ಭೂಕುಸಿತ ದುರಂತಗಳಲ್ಲಿ ಒಂದಾಗಿದೆ.