* ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರು ಡಿಸೆಂಬರ್ 15ರಿಂದ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.* ಲಂಕಾ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ದಿಸ್ಸನಾಯಕೆ ಅವರ ಭಾರತದ ಮೊದಲ ಭೇಟಿ ಇದಾಗಲಿದ್ದು, ಉಭಯ ದೇಶಗಳ ನಡುವಿನ ಬಾಂಧವ್ಯ ಸುಧಾರಿಸಲಿದೆ. ಎಂದು ಶ್ರೀಲಂಕಾ ಸಂಪುಟದ ವಕ್ತಾರ ನಲಿಂದಾ ಜಯತಿಷ್ಟೆ ತಿಳಿಸಿದ್ದಾರೆ.* ಭೇಟಿ ವೇಳೆ ಹಲವು ಕ್ಷೇತ್ರಗಳಲ್ಲಿ ಒಪ್ಪಂದಗಳು ಏರ್ಪಡುವ ಸಾಧ್ಯತೆಗಳಿವೆ. ದಿಸ್ಸನಾಯಕೆ ಅವರ ಜತೆ ವಿದೇಶಾಂಗ ಸಚಿವ ವಿಜಿತಾ ಹೇರಾತ್ ಮತ್ತು ಹಣಕಾಸು ಖಾತೆ ಸಹಾಯಕ ಸಚಿವ ಅನಿಲ್ ಜಯಂತ ಫರ್ನಾಂಡೋ ಕೂಡ ಆಗಮಿಸಲಿದ್ದಾರೆ. * ಲಂಕಾ ಅಧ್ಯಕ್ಷೀಯ ಚುನಾವಣೆ ನಂತರ ದಿಸ್ಸನಾಯಕೆ ಅವರನ್ನು ಭೇಟಿಯಾಗಿದ್ದ ಭಾರತದ ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ದಿಲ್ಲಿಗೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದ್ದರು.* ಭಾರತ ಪ್ರವಾಸದ ವೇಳೆ ದಿಸ್ಸನಾಯಕೆ ಅವರು ರಾಷ್ಟ್ರವತಿ ಬ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದು, ದ್ವಿಪಕ್ಷೀಯ ಬಾಂಧವ್ಯದ ಕುರಿತು ಮಾತುಕತೆ ನಡೆಸಲಿದ್ದಾರೆ.