* ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಜಾರಿ ಮಾಡಿದ್ದ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ, ಇದೀಗ ಸರ್ಕಾರ ಈ ಯೋಜನೆಯನ್ನು ಸರಳೀಕರಿಸುವ ನಿರ್ಧಾರ ತೆಗೆದುಕೊಂಡಿದೆ. ಈ ಭಾಗವಾಗಿ ಶೀಘ್ರದಲ್ಲೇ ಮಹಿಳೆಯರಿಗೆ ‘ಸಾರ್ಟ್ ಕಾರ್ಡ್’ ಅನ್ನು ವಿತರಿಸಲಾಗುತ್ತದೆ.* ಇದರಿಂದ ಬಸ್ ಪ್ರಯಾಣದ ವೇಳೆ ಮಹಿಳೆಯರು ಆಧಾರ್ ಕಾರ್ಡ್ ಇಟ್ಟುಕೊಳ್ಳುವ ತೊಂದರೆ ತಪ್ಪಲಿದೆ. ರಾಜ್ಯದ ಮಹಿಳೆಯರು ಸಾರಿಗೆ ಬಸ್ನಲ್ಲಿ ಪ್ರಯಾಣಿಸುವಾಗ ಈ ಕಾರ್ಡ್ ತೋರಿಸುವುದು ಸಾಕು.* ಈ ಕಾರ್ಡ್ ಮುಂದಿನ ಎರಡು ತಿಂಗಳಲ್ಲಿ ಉಚಿತವಾಗಿ ಮಹಿಳೆಯರ ಕೈಗೆ ತಲುಪಲಿದೆ. ಈಗಾಗಲೇ ಹಣಕಾಸು ಇಲಾಖೆಗೆ ಸಂಬಂಧಿತ ಕಡತ ಹೋಗಿದ್ದು, ಅಂತಿಮ ಅನುಮತಿಯಷ್ಟೇ ಬಾಕಿ ಇದೆ. ಈ ನಡುವೆ ಸಾರಿಗೆ ಇಲಾಖೆ ಟೆಂಡರ್ ಪ್ರಕ್ರಿಯೆಗೂ ಮುಂದಾಗಿದೆ.* ಮಹಿಳೆಯರು ಈ ಕಾರ್ಡ್ ಪಡೆಯಲು ಗ್ರಾಮ ಒನ್ ಅಥವಾ ಬೆಂಗಳೂರು ಒನ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು. ಸೇವಾಸಿಂಧು ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ನೀಡುವ ವ್ಯವಸ್ಥೆಯೂ ಕಲ್ಪಿಸಲಾಗಿದೆ.* ಸಾರ್ಟ್ ಕಾರ್ಡ್ ಪ್ರತ್ಯೇಕ ಪಾಸ್ ರೂಪದಲ್ಲಿ ನೀಡಲಾಗುವುದಿಲ್ಲ. ಅರ್ಜಿ ಸಲ್ಲಿಸಿದ ಕೂಡಲೇ ನೀಡಲಾಗುವ ಪ್ರಿಂಟ್ ಔಟ್ ಒಂದೇ ಸಾರ್ಟ್ ಕಾರ್ಡ್ ಆಗಿರುತ್ತದೆ. ಸೇವಾಕೇಂದ್ರದಲ್ಲಿಯೇ ಈ ಕಾರ್ಡ್ ಮುದ್ರಣಗೊಳ್ಳುತ್ತದೆ. ನಕಲಿ ಆಧಾರ್ ಕಾರ್ಡ್ ನೀಡಿದರೆ, ಅರ್ಜಿ ರದ್ದಾಗುವ ಸಾಧ್ಯತೆ ಇರುತ್ತದೆ.* ಇದು ಕೇವಲ ಕರ್ನಾಟಕದ ನಿವಾಸಿಗಳಿಗಷ್ಟೇ ಲಭ್ಯವಿರುವ ಸೌಲಭ್ಯವಾಗಿದ್ದು, ಆಧಾರ್ ಕಾರ್ಡ್ನಲ್ಲಿ ಕರ್ನಾಟಕದ ವಿಳಾಸ ಇದ್ದರೆ ಮಾತ್ರ ಕಾರ್ಡ್ ವಿತರಣೆ ಸಾಧ್ಯವಾಗುತ್ತದೆ.* ಶಕ್ತಿ ಯೋಜನೆಯ ಲಾಭ ಪಡೆಯಲು ವಿಳಾಸ ಬದಲಿಸಿ ಕಾರ್ಡ್ ಪಡೆಯಲು ಯತ್ನಿಸಿದರೆ, ಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತವಾಗಿದೆ.