* ಮಣಿಪುರದಲ್ಲಿ ಇದೇ ಮೇ 20ರಿಂದ ಶಿರುಇ ಲಿಲಿ ಹಬ್ಬಕ್ಕೆ ಚಾಲನೆ ನೀಡಲಾಗಿದ್ದು, ಮೇ 24ರ ತನಕ ನಡೆಯಲಿದೆ. * ಅಳಿವಿನಂಚಿನಲ್ಲಿರುವ ಶಿರುಇ ಲಿಲಿ ಹೂವುಗಳ ರಕ್ಷಣೆಗಾಗಿ ಜನಜಾಗೃತಿ ಉಂಟುಮಾಡಲು ಇಲ್ಲಿನ ಪ್ರವಾಸೋದ್ಯಮ ಇಲಾಖೆ ವತಿಯಿಂದ ಈ ಉತ್ಸವ ನಡೆಸಲಾಗುತ್ತದೆ.* ಮಣಿಪುರದ ರಾಜಧಾನಿ ಇಂಫಾಲ್ ನಿಂದ 83 ಕಿ.ಮೀ ದೂರದಲ್ಲಿರುವ ಉಕ್ರುಲ್ ಜಿಲ್ಲೆಯಲ್ಲಿ ಮಾತ್ರ ಈ ಹೂವುಗಳು ಕಾಣಸಿಗುತ್ತವೆ.* 2023ರಲ್ಲಿ ಉಂಟಾದ ಜನಾಂಗೀಯ ಸಂಘರ್ಷದ ನಂತರ ಆಚರಿಸುತ್ತಿರುವ ಮೊದಲ ಉತ್ಸವ ಇದಾಗಿದೆ. ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುವುದು ಉತ್ಸವದ ಪ್ರಮುಖ ಉದ್ದೇಶವಾಗಿದೆ.* ಶಿರುಯಿ ಲಿಲಿ ಉತ್ಸವವು ಮಣಿಪುರದಲ್ಲಿ ಆಚರಿಸಲಾಗುವ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು, ಉಮ್ರಲ್ ಜಿಲ್ಲೆಯ ಶಿರುಯಿ ಬೆಟ್ಟಗಳಲ್ಲಿ ಮಾತ್ರ ಬೆಳೆಯುವ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಸಸ್ಯಶಾಸ್ತ್ರೀಯ ಅದ್ಭುತವಾದ ಶಿರುಯಿ ಲಿಲಿಗೆ ಸಮರ್ಪಿಸಲಾಗಿದೆ.