* ಭಾರತವು ಇತ್ತೀಚೆಗೆ ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದವನ್ನು ರದ್ದುಗೊಳಿಸಿದ್ದರಿಂದ ಪ್ರತಿಕ್ರಿಯೆಯಾಗಿ ಪಾಕಿಸ್ತಾನವು 1972ರ ಶಿಮ್ಲಾ ಒಪ್ಪಂದವನ್ನು ಅಮಾನತುಗೊಳಿಸಿದೆ. * ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು ಪಾಕಿಸ್ತಾನ ವಿರುದ್ಧ ಹಲವು ಭದ್ರತಾ ಕ್ರಮಗಳನ್ನು ಕೈಗೊಂಡಿತ್ತು.* ಇದಕ್ಕೆ ಪಾಕಿಸ್ತಾನ ನಾಟಕೀಯವಾಗಿ ಪ್ರತಿಕ್ರಿಯಿಸಿ, ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ವಾಯುಪ್ರದೇಶವನ್ನು ಮುಚ್ಚಿದಷ್ಟೇ ಅಲ್ಲದೆ, ಎಲ್ಲಾ ದ್ವಿಪಕ್ಷೀಯ ವ್ಯವಹಾರಗಳನ್ನು ಸ್ಥಗಿತಗೊಳಿಸಿತು.ಶಿಮ್ಲಾ ಒಪ್ಪಂದ :* ಶಿಮ್ಲಾ ಒಪ್ಪಂದವು 1971ರ ಯುದ್ಧದ ನಂತರ ಇಂದಿರಾ ಗಾಂಧಿ ಮತ್ತು ಜುಲ್ಫಿಕರ್ ಅಲಿ ಭುಟ್ಟೋ ಸಹಿ ಹಾಕಿದ ಒಪ್ಪಂದವಾಗಿದ್ದು, ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೂ ದಾರಿ ಮಾಡಿತ್ತು. ಈ ಒಪ್ಪಂದವು ಭಾರತದ ಹಾಗೂ ಪಾಕಿಸ್ತಾನದ ನಡುವೆ ಶಾಂತಿಯುತ ಸಂಬಂಧ ಮತ್ತು ಸಮಸ್ಯೆಗಳ ದ್ವಿಪಕ್ಷೀಯ ಪರಿಹಾರಕ್ಕೆ ಅಡಿಪಾಯವಾಗಿತ್ತು. ಇದರಡಿಯಲ್ಲಿ ನಿಯಂತ್ರಣ ರೇಖೆ (LoC) ಅನ್ನು ಗೌರವಿಸುವ ಬಗ್ಗೆ ಒಪ್ಪಂದವಾಯಿತು.* ಪಾಕಿಸ್ತಾನ ಶಿಮ್ಲಾ ಒಪ್ಪಂದವನ್ನು ರದ್ದುಗೊಳಿಸಿರುವುದು ಕೆಲವೊಂದು ರೀತಿಯಲ್ಲಿ ಭಾರತಕ್ಕೆ ಲಾಭದಾಯಕವಾಗಿದೆ. ಶಿಮ್ಲಾ ಒಪ್ಪಂದದಡಿಯಲ್ಲಿ LoC ಅನ್ನು ಬದಲಾಯಿಸದಿರುವುದು ಬದ್ಧತೆ ಇತ್ತು.* ಈಗ ಪಾಕಿಸ್ತಾನ ಒಪ್ಪಂದವನ್ನು ತಿರಸ್ಕರಿಸಿದ್ದರಿಂದ, ಭಾರತ LoC ಬಗ್ಗೆ ತನ್ನ ನಿಲುವನ್ನು ಪುನರ್ಮೌಲ್ಯಮಾಪನ ಮಾಡಬಹುದಾಗಿದೆ. ಭೂಪ್ರದೇಶದ ನಿಯಂತ್ರಣ ಬದಲಾವಣೆಗೆ ಸಾಧ್ಯತೆಗಳೂ ಉದಯವಾಗಿವೆ. * ಇದಲ್ಲದೆ, ಪಾಕಿಸ್ತಾನವು ಈ ಹಿಂದೆ ಶಿಮ್ಲಾ ಒಪ್ಪಂದವನ್ನು ಉಲ್ಲಂಘಿಸಿದ ಉದಾಹರಣೆಗಳು ಇದ್ದವು, ಉದ್ದೇಶಪೂರ್ವಕವಾಗಿ LoC ದಾಟಿದ ಸಂದರ್ಭಗಳು ಇವೆ.* ಇದರಿಂದ ಪಾಕಿಸ್ತಾನವು ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿದಂತಾಗಿದೆ ಎಂಬ ಚರ್ಚೆಗಳು ರಾಜತಾಂತ್ರಿಕ ವಲಯದಲ್ಲಿ ಮುಂದುವರೆದಿವೆ. ಶಿಮ್ಲಾ ಒಪ್ಪಂದ ರದ್ದಾದಾಗ, ದ್ವಿಪಕ್ಷೀಯ ಮಾತುಕತೆಗಳ ಮೂಲಧಾರೆ ಅಸ್ತಿತ್ವದಲ್ಲಿಲ್ಲದ ಕಾರಣ, ಭಾರತ ಇನ್ನು ಮುಂದೆ ಗಡಿಪ್ರಶ್ನೆಗಳಿಗೆ ಏಕಪಕ್ಷೀಯವಾಗಿ ನಿಲುಕುವ ಸಾಧ್ಯತೆಯಿದೆ.