* ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷರಾಗಿ ಆಲಮಟ್ಟಿಯ ಚಂದ್ರಶೇಖರ ನುಗ್ಗಲಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಣ ಸಭೆಯಲ್ಲಿ ಚಂದ್ರಶೇಖರ ಅವರು ಅವಿರೋಧವಾಗಿ ಆಯ್ಕೆಯಾದರು. * ಚಂದ್ರಶೇಖರ ನುಗ್ಗಲಿ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಆಲಮಟ್ಟಿ, ವಂದಾಲ, ನಿಡಗುಂದಿಯಲ್ಲಿ ಪ್ರತ್ಯೇಕವಾಗಿ ವಿಜಯೋತ್ಸವದ ಕಹಳೆ ಮೊಳಗಿತು. ನಿಡಗುಂದಿ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು, ಚಂದ್ರಶೇಖರ ನುಗ್ಗಲಿ ಅಭಿಮಾನಿಗಳು ನಿಡಗುಂದಿ ಪಟ್ಟಣದ ಮುದ್ದೇಬಿಹಾಳ ಕ್ರಾಸ್ , ರೇಣುಕಾ ಮೆಡಿಕಲ್ ಶಾಪ್, ಬಸ್ ನಿಲ್ದಾಣ ಸೇರಿದಂತೆ ನಾನಾ ಕಡೆ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. * ಸಂಘದ ತಾಲೂಕು ಅಧ್ಯಕ್ಷ ಮಹಾಂತೇಶ ಮುಕಾರ್ತಿಹಾಳ ಹಾಗೂ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಲೀಂ ದಡೆದ, ಆರ್.ಬಿ.ಗೌಡರ ಮತ್ತಿತರರು ಮಾತನಾಡಿ 1ಲಕ್ಷ 80 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಯ ಸದಸ್ಯರಿರುವ ಆರು ದಶಕಗಳ ಇತಿಹಾಸ ಹೊಂದಿರುವ ಸಂಘಟನೆಯ ಚುಕ್ಕಾಣಿ ನಮ್ಮ ಜಿಲ್ಲೆಗೆ ಪ್ರಥಮ ಬಾರಿಗೆ ಲಭಿಸಿದೆ. ಶಿಕ್ಷಕ ಸಂಘಟನೆಗೆ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಚಂದ್ರಶೇಖರ ನುಗ್ಗಲಿ ಅವರಿಗೆ ಈ ಹುದ್ದೆ ತಾನಾಗಿಯೇ ಒಲಿದು ಬಂದಿದೆ ಎಂದರು. * ಸಂಘದ ರಾಜ್ಯ ಸಹ ಕಾರ್ಯದರ್ಶಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಕ್ರಿಯಾಶೀಲತೆ ಭಾವ ಬದ್ದತೆಯಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿರುವ ಚಂದ್ರಶೇಖರ ಸದ್ಯ ರಾಜ್ಯಾಧ್ಯಕ್ಷರಾಗಿರುವುದು ನಮ್ಮ ಹೆಮ್ಮೆ ಎಂದರು. ಕ್ರಿಯಾಶೀಲತೆ, ಸತತ ಶಿಕ್ಷಕರ ಪರ ಚಿಂತನೆ, ಎಲ್ಲರನ್ನೂ ಮುಂದಿಟ್ಟುಕೊಂಡು ನಡೆಯುವ ನುಗ್ಗಲಿ ಅವರ ನೇತೃತ್ವದಲ್ಲಿ ಶಿಕ್ಷಕ ಸಂಘಟನೆ ಇನ್ನಷ್ಟು ಬಲಾಢ್ಯವಾಗಲಿದೆ, ಶಿಕ್ಷಕರ ಜಟಿಲ ಸಮಸ್ಯೆಗಳು ಬಗೆಹರಿಯಲಿವೆ ಎಂದರು. * ಎಂ.ಎಂ. ಮುಲ್ಲಾ, ಬಸವರಾಜ ಯರವಿನತೆಲಿಮಠ, ಎಂ.ಆರ್. ಮಕಾನದಾರ, ಆರ್.ಎಸ್. ಕಮತ,ಕುಮಾರ ಬಾಗೇವಾಡಿ, ಮಹೇಶ ಗಾಳಪ್ಪಗೋಳ, ಮುತ್ತು ಯಳಮೇಲಿ,ಎನ್, ಬಿ, ದಾಸರ. ಮುತ್ತುರಾಜ ಹೆಬ್ಬಾಳ, ಕೆ.ಎಂ. ಗುಡದಿನ್ನಿ,ಶಿವಪ್ಪ, ಚಲವಾದಿ, ವೈ.ಎಸ್. ಗಂಗಶೆಟ್ಟಿ, ರಾಜು ಹಲಗಿ, ಎಮ್ ಜಿ ಚವ್ಹಾಣ, ಎಸ್, ಎಲ್, ಮಾನೆ, ಪಟ್ಟಣ ಪಂಚಾಯ್ತಿ ಸದಸ್ಯ ಕರಿಯಪ್ಪ ಸಿಂದಗಿ , ಆನಂದ ಗೌಡರ, ನಿಂಗರಾಜ ಲಮಾಣಿ, ಡಿ.ಕೆ. ಪಾಟೀಲ, ಹಣಮಂತಗೌಡ, ಪಾಟೀಲ, ಹಣಮಂತ, ಸುನಗದ, ಮತ್ತಿತರರು ಇದ್ದರು.