* ಬನ್ನೇರುಘಟ್ಟ ಉದ್ಯಾನವನದಿಂದ ನಾಲ್ಕು ಆನೆಗಳನ್ನು ಪ್ರಾಣಿ ವಿನಿಮಯ ಒಪ್ಪಂದದಡಿ ಜಪಾನ್ಗೆ ಕಳುಹಿಸಲಾಗಿದೆ. ಇನ್ನು ಎರಡು ಮೂರು ವಾರಗಳಲ್ಲಿ ಜಪಾನ್ನಿಂದ ಕ್ಯಾಪುಚಿನ್ ಕೋತಿಗಳು ಆಗಮಿಸಲಿವೆ.* ಉದ್ಯಾನವನದ ಅಧಿಕಾರಿ ಸೂರ್ಯಸೇನ್ ಪ್ರಕಾರ, ಮೊದಲ ಹಂತದಲ್ಲಿ ಸಣ್ಣ ಏಪ್ಸ್ ಗುಂಪಿನ ಕ್ಯಾಪುಚಿನ್ ಕೋತಿಗಳು ಬರುವುದಾಗಿ, ಮುಂದಿನ ಹಂತಗಳಲ್ಲಿ ಜಪಾನ್ನಿಂದ ಚಿಂಪಾಂಜಿಗಳೂ ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ತರಲಾಗುವುದು.* ಜುಲೈ 24ರಂದು, ದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರ ಹಾಗೂ ಇತರ ಇಲಾಖೆಗಳ ಅನುಮೋದನೆ ಪಡೆದು, 8 ವರ್ಷದ ಸುರೇಶ್, 9 ವರ್ಷದ ಗೌರಿ, 7 ವರ್ಷದ ಶೃತಿ ಮತ್ತು 5 ವರ್ಷದ ತುಳಸಿ ಎಂಬ ಮೂರು ಹೆಣ್ಣು ಹಾಗೂ ಒಂದು ಗಂಡು ಏಷ್ಯಾದ ಆನೆಗಳನ್ನು ಜಪಾನ್ನ ಹಿಮೇಜಿ ಸೆಂಟ್ರಲ್ ಪಾರ್ಕ್ಗೆ ಕಳುಹಿಸಲಾಗಿದೆ.* ಆನೆಗಳು ಸುರಕ್ಷಿತವಾಗಿ ತಲುಪಿ ಈ ಆನೆಗಳು ಜಪಾನ್ ವಾತವರಣಕ್ಕೆ ಹೊಂದಿಕೊಳ್ಳುತ್ತಿದ್ದು, ಆನೆ ಮೇಲ್ವಿಚಾರಕ ಸುರೇಶ್ ಯಾನೆ, ಬಯೋಲಾಜಿಸ್ಟ್ ಐಶ್ವರ್ಯ ಜತೆಗೆ ಕಾರ್ತಿಕ್, ಕಾಳಪ್ಪ, ದೇವಪ್ಪ ಮತ್ತು ಅಯ್ಯಪ್ಪ ಎಂಬ ನಾಲ್ವರು ಆನೆ ಮಾವುತರು ಜಪಾನ್ನಲ್ಲೇ ಉಳಿದು, * ಬಯೋಲಾಜಿಕಲ್ ಪಾರ್ಕಗೆ ಆನೆಗಳ ಬಗ್ಗೆ ಹಾಗೂ ಅವುಗಳನ್ನು ಪಳಗಿಸಿ ವಿಶ್ವಾಸ ಪಡೆಯಲು ಅಲ್ಲಿನ ಮಾವುತರಿಗೆ ತರಬೇತಿ ನೀಡುತ್ತಿದ್ದಾರೆ.