* ಭಾರತವು ಚಿಲಿ ಮತ್ತು ಪೆರು ದೇಶಗಳೊಂದಿಗೆ ಮುಂದಿನ ವ್ಯಾಪಾರ ಒಪ್ಪಂದ ಮಾತುಕತೆಗಳನ್ನು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಸಲಿದೆ.* ಅಕ್ಟೋಬರ್ 27ರಿಂದ ಚಿಲಿಯ ಸ್ಯಾಂಟಿಯಾಗೋದಲ್ಲಿ ಐದು ದಿನಗಳ ಮಾತುಕತೆ ನಡೆಯಲಿದ್ದು, ನವೆಂಬರ್ 3ರಿಂದ ಪೆರು ರಾಜಧಾನಿ ಲಿಮಾದಲ್ಲಿ ಮೂರು ದಿನಗಳ ಮಾತುಕತೆ ನಡೆಯಲಿದೆ.* ಚಿಲಿಯೊಂದಿಗೆ ನಡೆಯುವ ಮಾತುಕತೆ ಎರಡನೇ ಸುತ್ತಿನದ್ದಾಗಿದ್ದು, ಪೆರು ಜೊತೆಗಿನ ಮಾತುಕತೆ ಎಂಟನೇ ಸುತ್ತಿನದ್ದಾಗಿದೆ.* 2006ರಲ್ಲಿ ಭಾರತ ಮತ್ತು ಚಿಲಿ ಆದ್ಯತಾ ವ್ಯಾಪಾರ ಒಪ್ಪಂದ (ಪಿಟಿಎ) ಮಾಡಿಕೊಂಡಿದ್ದರೂ, ಇದೀಗ ಎರಡೂ ದೇಶಗಳು ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (ಸಿಇಪಿಎ) ಮುಂದಾಗಿವೆ.* 2024–25ರಲ್ಲಿ ಭಾರತದಿಂದ ಚಿಲಿಗೆ ₹10,200 ಕೋಟಿ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ 2.46ರಷ್ಟು ಕಡಿಮೆ.* ಪೆರುಗೆ ರಫ್ತು ಶೇ 9ರಷ್ಟು ಹೆಚ್ಚಳಿ ₹8,870 ಕೋಟಿಗೆ ತಲುಪಿದೆ. ಆಮದು ಪ್ರಮಾಣವು ಚಿಲಿಯಿಂದ ಶೇ 72 ಮತ್ತು ಪೆರುವಿನಿಂದ ಶೇ 60ರಷ್ಟು ಏರಿಕೆಯಾಗಿದೆ.