Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಶಹಾಪುರ್ ಕಂಡಿ ಯೋಜನೆ: ಪಾಕ್ ನೀರಿಗೆ ಬ್ರೇಕ್!
Authored by:
Akshata Halli
Date:
20 ಫೆಬ್ರುವರಿ 2026
➤
ಇದೀಗ ಭಾರತವು ಪಾಕಿಸ್ತಾನಕ್ಕೆ ಹರಿಯುತ್ತಿದ್ದ
'ರಾವಿ ನದಿ'ಯ (Ravi River)
ಹೆಚ್ಚುವರಿ ನೀರನ್ನು ತಡೆಯಲು ಮಹತ್ವದ ಹೆಜ್ಜೆಯನ್ನಿಟ್ಟಿದ್ದು,
"ಶಹಾಪುರ್ ಕಂಡಿ ಅಣೆಕಟ್ಟು ಯೋಜನೆ" (Shahpur Kandi Dam Project)
ಭಾರೀ ಸದ್ದು ಮಾಡುತ್ತಿದೆ.
➤
ಭಾರತವು ಈ ಶಹಾಪುರ್ ಕಂಡಿ ಅಣೆಕಟ್ಟನ್ನು ಪೂರ್ಣಗೊಳಿಸುವ ಮೂಲಕ, ದಶಕಗಳಿಂದ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ರಾವಿ ನದಿಯ ಹೆಚ್ಚುವರಿ ನೀರನ್ನು ಸಂಪೂರ್ಣವಾಗಿ ತಡೆಯಲು ಯೋಜಿಸಿದೆ. ಈ ನೀರನ್ನು ಪಂಜಾಬ್ ಮತ್ತು ಜಮ್ಮು-ಕಾಶ್ಮೀರದ ಕೃಷಿ ಭೂಮಿಗೆ ಹರಿಸುವುದು ಇದರ ಪ್ರಮುಖ ಉದ್ದೇಶ.
➤
ಈ ಅಣೆಕಟ್ಟು ರಾವಿ ನದಿಯ ಮೇಲೆ ನಿರ್ಮಿಸಲಾಗಿದೆ. ಇದು ಪಂಜಾಬ್ ರಾಜ್ಯದ ಪಠಾಣ್ಕೋಟ್ ಜಿಲ್ಲೆಯಲ್ಲಿ, ಜಮ್ಮು ಮತ್ತು ಕಾಶ್ಮೀರ–ಪಂಜಾಬ್ ಗಡಿಯ ಸಮೀಪದಲ್ಲಿದೆ. ಈಗಾಗಲೇ ರಾವಿ ನದಿ ನೀರನ್ನು ಸಂಗ್ರಹಿಸುತ್ತಿರುವ ಪ್ರಸಿದ್ಧ ರಂಜಿತ್ ಸಾಗರ್ ಅಣೆಕಟ್ಟಿನ ಕೆಳಭಾಗದಲ್ಲಿ (ಡೌನ್ಸ್ಟ್ರೀಮ್) ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ.
➤
ಐತಿಹಾಸಿಕ ಹಿನ್ನೆಲೆ: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ-1960 (Indus Water Treaty):
- 1960 ರಲ್ಲಿ ವಿಶ್ವಬ್ಯಾಂಕ್ನ (World Bank) ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ 'ಸಿಂಧೂ ನದಿ ನೀರು ಒಪ್ಪಂದ'ಕ್ಕೆ ಸಹಿ ಹಾಕಲಾಯಿತು.
- ಭಾರತದ ಹಕ್ಕು (Eastern Rivers):
ಈ ಒಪ್ಪಂದದ ಪ್ರಕಾರ ಮೂರು ಪೂರ್ವದ ನದಿಗಳಾದ
ರಾವಿ, ಬಿಯಾಸ್ ಮತ್ತು ಸಟ್ಲೆಜ್
ನದಿಗಳ ನೀರಿನ ಮೇಲೆ ಭಾರತಕ್ಕೆ ಸಂಪೂರ್ಣ ಹಕ್ಕಿದೆ.
- ಪಾಕಿಸ್ತಾನದ ಹಕ್ಕು (Western Rivers):
ಪಶ್ಚಿಮದ ನದಿಗಳಾದ
ಸಿಂಧೂ, ಝೇಲಂ ಮತ್ತು ಚೀನಾಬ್
ನದಿಗಳ ನೀರು ಪಾಕಿಸ್ತಾನಕ್ಕೆ ಸೇರಿದೆ.
➤
ಭಾರತಕ್ಕೆ ರಾವಿ ನದಿಯ ಮೇಲೆ ಸಂಪೂರ್ಣ ಹಕ್ಕಿದ್ದರೂ, ಅದನ್ನು ತಡೆದು ನಿಲ್ಲಿಸಲು ಸೂಕ್ತ ಅಣೆಕಟ್ಟುಗಳಿಲ್ಲದ ಕಾರಣ ಇಷ್ಟು ವರ್ಷಗಳ ಕಾಲ ಅಪಾರ ಪ್ರಮಾಣದ ನೀರು ಪಾಕಿಸ್ತಾನದ ಪಾಲಾಗುತ್ತಿತ್ತು. ಇದೀಗ ಶಹಾಪುರ್ ಕಂಡಿ ನಿರ್ಮಾಣದಿಂದ ನಮ್ಮ ಹಕ್ಕಿನ ನೀರು ನಮ್ಮಲ್ಲೇ ಉಳಿಯಲಿದೆ.
➤
ಈ ಯೋಜನೆಯ ಪ್ರಮುಖ ಅಂಶಗಳು ಮತ್ತು ಲಾಭಗಳನ್ನು ನೋಡಿದರೆ, ರಂಜಿತ್ ಸಾಗರ್ ಅಣೆಕಟ್ಟಿನಿಂದ ಬಿಡುಗಡೆಯಾಗುವ ನೀರನ್ನು ಸಂಗ್ರಹಿಸಿ ಜಲವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ ಮತ್ತು ಇದರಿಂದ ಒಟ್ಟು 206 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ದೊರೆಯುತ್ತದೆ. ನೀರಾವರಿ ದೃಷ್ಟಿಯಿಂದ, ಜಮ್ಮು ಮತ್ತು ಕಾಶ್ಮೀರದ ಕಥುವಾ ಹಾಗೂ ಸಾಂಬಾ ಜಿಲ್ಲೆಗಳ ಸುಮಾರು 32,000 ಹೆಕ್ಟೇರ್ ಕೃಷಿಭೂಮಿಗೆ ಮತ್ತು ಪಂಜಾಬ್ನ ಸುಮಾರು 5,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಲಭಿಸುತ್ತದೆ. ಈ ಮಹತ್ವದ ಯೋಜನೆಯನ್ನು ಕೇಂದ್ರ ಸರ್ಕಾರವು 2008ರಲ್ಲಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದೆ. ಹಣಕಾಸು ಹಂಚಿಕೆಯ ಪ್ರಕಾರ, ನೀರಾವರಿ ಭಾಗದ ಒಟ್ಟು ವೆಚ್ಚದಲ್ಲಿ ಪಂಜಾಬ್ ಸರ್ಕಾರವು ಶೇ. 80 ರಷ್ಟು ವೆಚ್ಚವನ್ನು ಭರಿಸುವುದಾಗಿ ಮತ್ತು ಕೇಂದ್ರ ಸರ್ಕಾರವು ಶೇ. 20 ರಷ್ಟು ಆರ್ಥಿಕ ನೆರವನ್ನು ನೀಡುವುದಾಗಿ ನಿಗದಿಯಾಗಿದೆ.
Take Quiz
Loading...