Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಶಾಲೆಯ ಅಂಗಳದಲ್ಲಿ ತಾರಾಲಯ — ಗ್ರಾಮೀಣ ಮಕ್ಕಳಿಗೆ ಆಕಾಶವಿಜ್ಞಾನವನ್ನು ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆ
28 ನವೆಂಬರ್ 2025
* ಕರ್ನಾಟಕ ಸರ್ಕಾರವು ಗ್ರಾಮೀಣ ಮತ್ತು ಹಿನ್ನಡೆ ಪ್ರದೇಶಗಳ ವಿದ್ಯಾರ್ಥಿಗಳಿಗೆ ವಿಶ್ವಮಟ್ಟದ ವಿಜ್ಞಾನ ಹಾಗೂ ಖಗೋಳಶಾಸ್ತ್ರದ (Astronomy) ಅನುಭವವನ್ನು ನೇರವಾಗಿ ತಲುಪಿಸುವ ಗುರಿಯೊಂದಿಗೆ
“ಶಾಲೆಯ ಅಂಗಳದಲ್ಲಿ ತಾರಾಲಯ” (Digital Mobile Planetarium)
ಎಂಬ ಹೊಸ ಮತ್ತು ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದೆ. ವಿಧಾನಸೌಧ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಯೋಜನೆಯ ಅಧಿಕೃತ ಪ್ರಾರಂಭ ಮಾಡಿದರು.
* ಇಂದಿನ ಜ್ಞಾನಾಧಾರಿತ ಸಮಾಜದಲ್ಲಿ ವಿಜ್ಞಾನ, ವಿಶೇಷವಾಗಿ
ಆಕಾಶವಿಜ್ಞಾನ ಮತ್ತು ಬಾಹ್ಯಾಕಾಶ ವಿಜ್ಞಾನ
, ಮಕ್ಕಳಲ್ಲಿ ಕುತೂಹಲ, ಪ್ರಶ್ನಿಸುವ ಸಾಮರ್ಥ್ಯ ಮತ್ತು ಸಂಶೋಧನಾ ಮನೋಭಾವವನ್ನು ಬೆಳೆಸುವ ಪ್ರಮುಖ ಸಾಧನ.
* ಆದರೆ ಸಾಮಾನ್ಯವಾಗಿ ಪ್ಲಾನೆಟೇರಿಯಂಗಳು ರಾಜ್ಯ ರಾಜಧಾನಿಗಳು ಮತ್ತು ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿವೆ. ಈ ಕಾರಣದಿಂದ — ಹಳ್ಳಿಗಳಲ್ಲಿ, ಬಡ ವಿದ್ಯಾರ್ಥಿಗಳಲ್ಲಿ, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಇಂತಹ ಅನುಭವ ಕಡಿಮೆ ಆಗಿತ್ತು ಆದ್ದರಿಂದ ಈ ಅಂತರವನ್ನು ನೀಗಿಸಲು ಸರ್ಕಾರವು ಒಂದು ಕ್ರಾಂತಿಕಾರಿ ಹೆಜ್ಜೆ ಹಾಕಿ
ಪ್ಲಾನೆಟೇರಿಯಂ ಅನುಭವವನ್ನು ‘ಶಾಲೆಯ ಅಂಗಳದಲ್ಲೇ
’ ತಲುಪಿಸುವ ಯೋಜನೆಯನ್ನು ರೂಪಿಸಿದೆ.
* ಯೋಜನೆಯ ಭಾಗವಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ತಾರಾಲಯ (Planetarium) ಅಳವಡಿಸಲಾಗಿದೆ. ಮೊಬೈಲ್ ತಾರಾಲಯದ ಪ್ರಮುಖ ವೈಶಿಷ್ಟ್ಯಗಳು :
1️⃣ 5 ಮೀಟರ್ ಗಾತ್ರದ ಗುಂಬಜ್ (Dome theatre) ; ಇದರಲ್ಲಿ ವಿದ್ಯಾರ್ಥಿಗಳಿಗೆ 360° ಆಕಾಶದ ನೈಜ ಅನುಭವ ಗ್ಯಾಲಕ್ಸಿ, ನಕ್ಷತ್ರ, ಗ್ರಹಗಳು, ಧೂಮಕೇತು ಮೊದಲಾದ ಬ್ರಹ್ಮಾಂಡದ ದೃಶ್ಯಾವಳಿಗಳನ್ನು ತ್ರಿಮಾನದ ಅನುಭವದಂತೆ ತೋರಿಸುತ್ತದೆ.
2️⃣ 360° ಫಿಶ್-ಐ ಲೆನ್ಸ್ ಪ್ರೊಜೆಕ್ಟರ್ ; ನಾಸಾ ಅಥವಾ ಇತರ ವಿಜ್ಞಾನ ಸಂಸ್ಥೆಗಳ ಮಾನದಂಡದ ದೃಶ್ಯಗಳನ್ನು ಪ್ರದರ್ಶಿಸಲು ಸಾಮರ್ಥ್ಯ.ಪ್ರಪಂಚದ ಯಾವುದೇ ಪ್ಲಾನೆಟೇರಿಯಂ ಮಟ್ಟದ ಗುಣಮಟ್ಟ.
3️⃣ ಹವಾ ನಿಯಂತ್ರಣ ವ್ಯವಸ್ಥೆ (Air-conditioned environment) ; ಗ್ರಾಮೀಣ ಪ್ರದೇಶಗಳಲ್ಲೂ ಮಕ್ಕಳಿಗೆ ಆರಾಮದಾಯಕ ವಾತಾವರಣ.
4️⃣ ಅತ್ಯಾಧುನಿಕ ಧ್ವನಿವರ್ಧಕ ವ್ಯವಸ್ಥೆ; surround sound ಅನುಭವದಿಂದ ಮಕ್ಕಳಿಗೆ ನೈಜ ಬಾಹ್ಯಾಕಾಶ ಅನುಭವ ಮೂಡಿಸುವುದು.
5️⃣ ಸಂಪೂರ್ಣವಾಗಿ ಡಿಜಿಟಲ್ ನಿಯಂತ್ರಣ; ವಿಭಿನ್ನ ವಯಸ್ಸಿನ ಮಕ್ಕಳಿಗೆ ಅನುಗುಣವಾದ ವೈಜ್ಞಾನಿಕ ಚಲನಚಿತ್ರ ಮತ್ತು simulations.
ಯಾವ ರೀತಿಯ ವಿಷಯಗಳನ್ನು
* ಮಕ್ಕಳು ಸೌರವ್ಯೂಹದ (Solar System) ಸಂಚಾರ ,ನಕ್ಷತ್ರಗಳ ಜನನ ಮತ್ತು ಮರಣ, ಗ್ಯಾಲಕ್ಸಿಗಳ ರಚನೆ, ಚಂದ್ರನ ಮೇಲ್ಮೈ ಮತ್ತು ಮಂಗಳ ಗ್ರಹ ಅನ್ವೇಷಣೆ, ಬಿಗ್ ಬ್ಯಾಂಗ್ ಸಿದ್ಧಾಂತ, ಬ್ಲ್ಯಾಕ್ ಹೋಲ್ಗಳ ರಹಸ್ಯಗಳು, ಭಾರತೀಯ ಬಾಹ್ಯಾಕಾಶ ಸಾಧನೆಗಳು (ISRO missions), ಕಾಣಬಹುದು ಈ ದೃಶ್ಯಾವಳಿಗಳು ಮಕ್ಕಳಲ್ಲಿ ಕಲ್ಪನೆ, ವಿಜ್ಞಾನ ಚೇತನ, ಸ್ಪೇಸ್ ಟೆಕ್ನಾಲಜಿಯ ಆಸಕ್ತಿ ಹೆಚ್ಚಿಸುತ್ತವೆ.
Take Quiz
Loading...