* ಪ್ರತಿವರ್ಷ ಸೆಪ್ಟೆಂಬರ್ 29 ರಂದು ಹೃದ್ರೋಗ ಹಾಗೂ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಹಾಗೂ ಹೃದಯದ ಆರೋಗ್ಯದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ವಿಶ್ವ ಹೃದಯ ದಿನವನ್ನು (World Heart Day) ಆಚರಿಸಲಾಗುತ್ತದೆ. * ವಿಶ್ವ ಹೃದಯ ದಿನದ 2025 ರ ಥೀಮ್ "ಡೋಂಟ್ ಮಿಸ್ ಎ ಬೀಟ್" (“Don't Miss a Beat") ಎಂಬುದು ಥೀಮ್ ಆಗಿದೆ.* 1999 ರಲ್ಲಿ ವರ್ಲ್ಡ್ ಹಾರ್ಟ್ ಫೆಡರೇಶನ್ (WHF), ವಿಶ್ವ ಅರೋಗ್ಯ ಸಂಸ್ಥೆ (WHO) ಸಹಯೋಗದೊಂದಿಗೆ ಮೊದಲ ಬಾರಿಗೆ ವಿಶ್ವ ಹೃದಯ ದಿನವನ್ನು ಆಚರಿಸಲಾಯಿತ್ತು. * 1997 ರಿಂದ 2011 ರವರೆಗೆ ವರ್ಲ್ಡ್ ಹಾರ್ಟ್ ಫೆಡರೇಶನ್ ಅಧ್ಯಕ್ಷ ಆಂಟೋನಿ ಬೇಯೆಸ್ ಡಿ ಲೂನಾ ಅವರು ಈ ಕಲ್ಪನೆಯನ್ನು ರೂಪಿಸಿದ್ದರು. ವಾರ್ಷಿಕ ಈವೆಂಟ್ನ ಮೊದಲ ಆಚರಣೆಯು 24,ಸೆಪ್ಟೆಂಬರ್ 2000 ರಂದು ನಡೆಯಿತು ಮತ್ತು 2011 ರವರೆಗೆ ಸೆಪ್ಟೆಂಬರ್ನಲ್ಲಿ ಕೊನೆಯ ಭಾನುವಾರದಂದು ವಿಶ್ವ ಹೃದಯ ದಿನವನ್ನು ಆಚರಿಸಲಾಯಿತು.* ಹೃದಯದ ಆರೋಗ್ಯ, ಹೃದಯ ರಕ್ತನಾಳ, ಹೃದಯದ ಮೇಲೆ ಒತ್ತಡ, ವ್ಯಾಯಾಮದ ಪರಿಣಾಮ ಇನ್ನು ಮುಂತಾದ ಹಲವು ಕಾರಣಗಳು ಮತ್ತು ಮುನ್ನೆಚ್ಚರಿಕೆಯ ಬಗ್ಗೆ ಸಾಂಕೇತಿಕವಾಗಿ ಜಾಗೃತಿ ಮೂಡಿಸುವುದನ್ನು ಇಂದು ಬಹುತೇಕ ಆಸ್ಪತ್ರೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. * ಆಯುರ್ವೇದಲ್ಲಿ ಆಹಾರವೇ ಔಷಧ ಎನ್ನುವ ಸೂತ್ರದ ಪ್ರಕಾರ, ಅವರವರ ದೇಹ ಪ್ರಕೃತಿಯ ವಾತ, ಪಿತ್ತ ಮತ್ತು ಕಫದ ಅನುಸಾರ ಆಹಾರಪದ್ಧತಿಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಲಾಗುತ್ತದೆ.* ವಿಶ್ವಸಂಸ್ಥೆಯ ಪ್ರಕಾರ ಹೃದಯ ಸಂಬಂಧಿ ರೋಗಗಳು ಅಂದಾಜು 60% ಏರಿಕೆಯಲಿದ್ದು, ಸದ್ಯ ಪ್ರಪಂಚದಲ್ಲಿ ಒಟ್ಟು 20 ಕೋಟಿ ಜನರಿಗೆ ಹೃದಯ ಸಂಬಂಧಿ ರೋಗಗಳಿವೆ. ಒಂದು ಬೈಪಾಸ್ ಶಸ್ತ್ರಕ್ರಿಯೆಗೆ ಭಾರತದಲ್ಲಿ 8,000 ಡಾಲರ್ ಆದರೆ ಅಮೆರಿಕದಲ್ಲಿ 1,25,000 ಡಾಲರ್ ಇದೆ.* ಡಬ್ಲ್ಯೂ ಎಚ್ಓ ಪ್ರಕಾರ : ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ನಿಷ್ಕ್ರಿಯತೆ, ಅತಿಯಾದ , ಒತ್ತಡ, ತಂಬಾಕು ಸೇವನೆ, ಮದ್ಯಸೇವನೆಯು ಹೃದಯ ಸಂಬಂದಿ ಕಾಯಿಲೆಗಳಿಗೆ ಕಾರಣವಾಗುತ್ತದೆ.