* ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಸಮುದಾಯದಲ್ಲಿ ಪ್ರವಾಸೋದ್ಯಮದ ಪಾತ್ರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. * 2025 ರ ವಿಶ್ವ ಪ್ರವಾಸೋದ್ಯಮ ದಿನದ ಥೀಮ್ "ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು" ಎಂಬುದು ಥೀಮ್ ಆಗಿದೆ.* ಈ ಥೀಮ್ ಸುಸ್ಥಿರ ಪ್ರವಾಸೋದ್ಯಮ ಮೂಲಸೌಕರ್ಯದಲ್ಲಿ ಹೂಡಿಕೆಯ ತುರ್ತು ಅಗತ್ಯವನ್ನು ಒತ್ತಿಹೇಳುತ್ತದೆ ಮತ್ತು ಸಮುದಾಯಗಳು ಮತ್ತು ಆರ್ಥಿಕತೆಗಳನ್ನು ಏಳಿಗೆಗೆ ಅನುವು ಮಾಡಿಕೊಡುವಾಗ ನಮ್ಮ ಗ್ರಹವನ್ನು ರಕ್ಷಿಸಲು ಸಹಾಯ ಮಾಡುವ ಯೋಜನೆಗಳು.* ಕಳೆದ ಆರು ದಶಕಗಳಿಂದ ಪ್ರವಾಸೋದ್ಯಮ ಕ್ಷೇತ್ರವು ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ವಲಯವಾಗಿ ಪರಿಣಮಿಸಿದೆ. ಈ ಕ್ಷೇತ್ರವು ಜಗತ್ತಿನ ಜಿಡಿಪಿಗೆ ಅಂದಾಜು ಶೇ.7.6ರಷ್ಟು ಕಾಣಿಕೆ ನೀಡುತ್ತಿದೆ.* 1979 ಸೆಪ್ಟೆಂಬರ್ 27 ರಂದು ವಿಶ್ವಸಂಸ್ಥೆಯ ವರ್ಡ್ ಟೂರಿಸಂ ಆರ್ಗನೈಜೇಷನ್ (UNWTO) ಶಾಸನಗಳನ್ನು ಅಂಗೀಕರಿಸಿತ್ತು. 1980 ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲು ಗೊತ್ತುವಳಿಗಳನ್ನು ಅಂಗೀಕರಿಸಿತು ಅಂದಿನಿಂದ ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ ಏಕೆಂದರೆ ಈ (ಸೆಪ್ಟೆಂಬರ್ 27) ದಿನಾಂಕವು UNWTO ನ ಶಾಸನಗಳನ್ನು ಅಳವಡಿಸಿಕೊಂಡ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.* ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರತಿ ವರ್ಷ ನಡೆಯುವ ಅತ್ಯುತ್ತಮ ಪ್ರವಾಸಿ ಹಳ್ಳಿಗಳು ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. * 2024 ರಲ್ಲಿ ಜಾರ್ಜಿಯಾ ವಿಶ್ವ ಪ್ರವಾಸೋದ್ಯಮ ದಿನವನ್ನು ಆಯೋಜಿಸುತ್ತದೆ. ವೈವಿಧ್ಯಮಯ ಭೌಗೋಳಿಕತೆಗೆ ಹೆಸರಾದ ಜಾರ್ಜಿಯಾ ಕಾಕಸಸ್ ಪರ್ವತಗಳ ಹಿಮದಿಂದ ಆವೃತವಾದ ಶಿಖರಗಳು, - ಕಾಖೆಟಿಯಲ್ಲಿನ ದ್ರಾಕ್ಷಿ ತೋಟಗಳು, ಕಪ್ಪುಸಮುದ್ರದ ಕರಾವಳಿಯನ್ನು ಹೊಂದಿದೆ. ಪ್ರವಾಸಿಗರು - ಸ್ಟೀಲಿಸಿಯಂಥ ಐತಿಹಾಸಿಕ ನಗರವನ್ನು ಅನ್ವೇಷಿಸ ಬಹುದು. * ಇದರ ಆಕರ್ಷಕ ಕೋಬ್ಲೆಸ್ಟೋನ್ ಬೀದಿಗಳು, ರೋಮಾಂಚಕ ಕಲಾದೃಶ್ಯಗಳು, ಹಳೆಯ ಮತ್ತು ಹೊಸ ವಾಸ್ತುಶಿಲ್ಪದ ಸಂಯೋಜನೆಗೆ ಹೆಸರಾಗಿದೆ.* ಪ್ರವಾಸೋದ್ಯಮ ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ. ಇದು ರಾಷ್ಟ್ರೀಯ ಜಿಡಿಪಿಗೆ ಶೇ.6.23ರಷ್ಟು ಕೊಡುಗೆ ನೀಡುತ್ತದೆ. * ಭಾರತದಲ್ಲಿ ಒಟ್ಟು ಉದ್ಯೋಗ ಸೃಷ್ಟಿಯಲ್ಲಿ ಶೇ.8.78ರಷ್ಟು ಕೊಡುಗೆ ನೀಡುತ್ತದೆ. ವಾರ್ಷಿಕ 5 ದಶಲಕ್ಷಕ್ಕಿಂತ ಹೆಚ್ಚು ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡುತ್ತಾರೆ. ಅಂತೆಯೇ 562 ದಶಲಕ್ಷ ದೇಶೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ.