* ಪ್ರತಿ ವರ್ಷ ಸೆಪ್ಟೆಂಬರ್ 23 ರಂದು ಸಂಕೇತ ಭಾಷೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕಿವುಡರು ಮತ್ತು ಸಂಕೇತ ಭಾಷೆಯನ್ನು ಬಳಸುವ ಇತರ ಜನರ ಭಾಷಾ ಗುರುತನ್ನು ರಕ್ಷಿಸಲು ಅಂತರರಾಷ್ಟ್ರೀಯ ಸಂಜ್ಞಾ ಭಾಷೆಗಳ ದಿನವನ್ನು ಆಚರಿಸಲಾಗುತ್ತದೆ. * ಅಂತರಾಷ್ಟ್ರೀಯ ಸಂಕೇತ ಭಾಷೆಯ ದಿನದ 2025 ರ ಥೀಮ್ "ಸಂಜ್ಞೆ ಭಾಷೆಯ ಹಕ್ಕುಗಳಿಲ್ಲದೆ ಮಾನವ ಹಕ್ಕುಗಳಿಲ್ಲ" - ಕಿವುಡ ವ್ಯಕ್ತಿಗಳಿಗೆ ಸಮಾನತೆ, ಸೇರ್ಪಡೆ ಮತ್ತು ಘನತೆಯನ್ನು ಖಾತ್ರಿಪಡಿಸುವಲ್ಲಿ ಸಂಕೇತ ಭಾಷೆಯ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುತ್ತದೆ.* ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಈ ನಿರ್ದಿಷ್ಟ ದಿನವನ್ನು ಅಂತರಾಷ್ಟ್ರೀಯ ಸಂಕೇತ ಭಾಷೆಗಳ ದಿನವನ್ನಾಗಿ ಸ್ಮರಿಸಲು ನಿರ್ಧರಿಸಿತು.* ಈ ದಿನವನ್ನು ಪ್ರತಿ ವರ್ಷ, 2017 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಅಧಿಕೃತವಾಗಿ ಸ್ಥಾಪಿಸಲಾಯಿತು. ಸಂಕೇತ ಭಾಷೆಯ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು, ಕಿವುಡರ ಭಾಷಾ ಮತ್ತು ಸಾಂಸ್ಕೃತಿಕ ಗುರುತನ್ನು ಉತ್ತೇಜಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. * 'ವರ್ಲ್ಡ್ ಫೆಡರೇಷನ್ ಆಫ್ ದಿ ಡೆಫ್' (WFD) ಕಿವುಡ ಜನರ 135 ರಾಷ್ಟ್ರೀಯ ಸಂಘಗಳ ಒಕ್ಕೂಟವಾಗಿದ್ದು, ಫೆಡರೇಶನ್ ಪ್ರಪಂಚದಾದ್ಯಂತ ಸುಮಾರು 70 ಮಿಲಿಯನ್ ಕಿವುಡ ಜನರನ್ನು ಪ್ರತಿನಿಧಿಸುತ್ತದೆ.* ಕಿವಿ ಕೇಳದಿರುವವರ ಅಂತರರಾಷ್ಟ್ರೀಯ ವಾರದ ಭಾಗವಾಗಿ 2018 ರಲ್ಲಿ ಮೊದಲ ಅಂತರರಾಷ್ಟ್ರೀಯ ಸಂಕೇತ ಭಾಷೆಯ ದಿನವನ್ನು ಆಚರಿಸಲಾಗಿದ್ದು, ಇದು ಸೆಪ್ಟೆಂಬರ್ 1958 ರಲ್ಲಿ ಮೊದಲು ಆಚರಿಸಲಾಯಿತ್ತು.* ಕಿವಿ ಕೇಳದವರು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುವ ಸಮಸ್ಯೆಗಳ "ಕುರಿತು ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಸಂಘಟನೆಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ನೀಲಿ ದೀಪ ಬೆಳಗಿಸಿ ಸಂಜ್ಞಾ ಭಾಷಾ ದಿನವನ್ನು ಆಚರಿಸುತ್ತವೆ.