* ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಅವರು ಸೆಪ್ಟೆಂಬರ್ 21ರಂದು ಕ್ವಾಡ್ ರಾಷ್ಟ್ರಗಳ ಶೃಂಗಸಭೆಯನ್ನು ಆಯೋಜಿಸಿದ್ದಾರೆ.* ಈ ಶೃಂಗ ಸಭೆಯಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ನ ಪ್ರಧಾನಮಂತಿಗಳು ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷರ ವಕ್ತಾರರು ತಿಳಿಸಿದ್ದಾರೆ.* ಭಾರತವು ಈ ವರ್ಷ ನಡೆಸಬೇಕಿದ್ದ ಕ್ವಾಡ್ ಶೃಂಗಸಭೆಯನ್ನು ಮುಂದಿನ ವರ್ಷ ಆಯೋಜಿಸಲಾಗಿದೆ.* ಜೋ ಬೈಡನ್ ಅವರ ಅಧ್ಯಕ್ಷ ಹುದ್ದೆಯ ಅಧಿಕಾರವು ಕೆಲವೇ ತಿಂಗಳುಗಳ ಕಾಲ ಉಳಿದಿರುವಂತೆಯೇ, ಅವರು ಕ್ವಾಡ್ ಶೃಂಗ ಸಭೆ ಆಯೋಜಿಸುವ ಮೂಲಕ ವಿದೇಶಾಂಗ ನೀತಿಯ ಪರಂಪರೆಯನ್ನು ಮುಂದುವರೆಸುವ ಪ್ರಯತ್ನವನ್ನು ನಡೆಸಿದ್ದಾರೆ.* ಕ್ವಾಡ್ ರಾಜತಾಂತ್ರಿಕ ಸಹಭಾಗಿತ್ವದ ಒಕ್ಕೂಟವಾಗಿದ್ದು, ಭಾರತ, ಆಸ್ಟ್ರೇಲಿಯಾ ಹಾಗು ಜಪಾನ ಸದಸ್ಯ ರಾಷ್ಟ್ರಗಳಾಗಿವೆ.* ಆಸ್ಟ್ರೇಲಿಯಾದ ಪ್ರಧಾನಿ ಅಂಥೋನಿ ಅಲ್ಬನಿಸ್, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ನ್ ಪ್ರಧಾನಿ ಫ್ಯೂಮಿಯೋ ಕಿಶಿಡಾ ಅವರನ್ನು ಸ್ವಾಗತಿಸಲು ಎದುರು ನೋಡುತಿದ್ದರೆ.