* ಹೈದರಾಬಾದ್ ಸಂಸ್ಥಾನವನ್ನು ಒಕ್ಕೂಟ ವ್ಯವಸ್ಥೆಗೆ ಸೇರಿಸಲು ಅಂದಿನ ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲರು ಕೈಗೊಂಡ ಕಾರ್ಯಾಚರಣೆಯೆ "ಆಪರೇಷನ್ ಪೋಲೋ" * 1948ರ ಸೆಪ್ಟೆಂಬರ್ 13 ರಿಂದ 17ರ ವರೆಗೆ ಈ ಕಾರ್ಯಾಚರಣೆ ಜರುಗಿದ್ದು, 1948ರ ಸೆಪ್ಟೆಂಬರ್ 17ರಂದು ಹೈದರಾಬಾದ್ ನಿಜಾಮನಿಂದ ಹೈದರಾಬಾದ್ ಮುಕ್ತಿಗೊಂಡಿತು. ಇದನ್ನೇ "ಕಲ್ಯಾಣ ಕರ್ನಾಟಕದ ದಿನ"ವನ್ನಾಗಿ ಆಚರಿಸಲಾಗುತ್ತದೆ .* "ಆಪರೇಷನ್ ಪೋಲೋ" ಎಂದು ಹೆಸರು ಬರಲು ಕಾರಣ ಹೈದರಾಬಾದ್ನಲ್ಲಿ ಪೋಲೋ ಮೈದಾನಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ "ಆಪರೇಷನ್ ಪೋಲೋ" ಎಂದು ಹೆಸರಿಡಲಾಯಿತು.* ಭಾರತದ ಶ್ರೀಮಂತ ರಾಜ್ಯಗಳಲ್ಲಿ ಕರ್ನಾಟಕ ಅತ್ಯಂತ ಪ್ರಮುಖವಾದದ್ದು ಕರ್ನಾಟಕದ ರಾಜಧಾನಿ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ ಕರ್ನಾಟಕವನ್ನು ಸರಳವಾಗಿ ಇಲ್ಲಿನ ಭೌಗೋಳಿಕತೆಯ ಆಧಾರದ ಮೇಲೆ ಐದು ವಿಭಾಗಗಳಾಗಿ ವಿಂಗಡಿಸಬಹುದು.1) ಮಲೆನಾಡು ಕರ್ನಾಟಕ2) ಮೈಸೂರು ಕರ್ನಾಟಕ3) ಕರಾವಳಿ ಕರ್ನಾಟಕ4) ಕಿತ್ತೂರು (ಮುಂಬೈ) ಕರ್ನಾಟಕ5) ಕಲ್ಯಾಣ (ಹೈದರಾಬಾದ್) ಕರ್ನಾಟಕ