* ಇಂಜಿನಿಯರಿಂಗ್ ಕ್ಷೇತ್ರ ಹಾಗೂ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಸಾಧನೆಯನ್ನು ಶ್ಲಾಘಿಸುವ ಸಲುವಾಗಿ, ದೇಶದ ಅಭಿವೃದ್ಧಿ ಕಾರ್ಯದಲ್ಲಿ ಇಂಜಿನಿಯರ್ಗಳ ಕೊಡುಗೆಯನ್ನು ಗೌರವಿಸುವ ಸಲುವಾಗಿ ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ.* ಪ್ರತಿ ವರ್ಷ ಸರ್ ವಿಶ್ವೇಶ್ವರಯ್ಯ ಅವರ ಜನ್ಮದಿನದ ನೆನಪಿಗಾಗಿ ರಾಷ್ಟ್ರೀಯ ಎಂಜಿನಿಯರ್ಗಳ ದಿನವನ್ನು ಆಚರಿಸಲಾಗುತ್ತದೆ.* 1861 ರಲ್ಲಿ ಜನಿಸಿದ ವಿಶ್ವೇಶ್ವರಯ್ಯ ಅವರು ಪ್ರಖ್ಯಾತ ಇಂಜಿನಿಯರ್ ವಿದ್ವಾಂಸ ಮತ್ತು ರಾಜಕಾರಣಿಯಾದ ವಿಶ್ವೇಶ್ವರಯ್ಯ ಜನ್ಮ ದಿನವನ್ನು ಇಂಜಿನಿಯರ್ ದಿನವಾಗಿ ಆಚರಿಸಲಾಗುತ್ತದೆ. ಇಂಜಿನಿಯರ್ ದಿನವನ್ನು ಮೊದಲ ಬಾರಿಗೆ 1968, ಸೆಪ್ಟೆಂಬರ್ 15 ರಂದು ಆಚರಣೆ ಮಾಡಲಾಯಿತು.* "ಸುಸ್ಥಿರ ಭವಿಷ್ಯಕ್ಕಾಗಿ ನಾವೀನ್ಯತೆ" ಎಂಬ ವಿಷಯದ ಮೇಲೆ ಕೇಂದ್ರೀಕರಿಸುತ್ತದೆ. ಸುಸ್ಥಿರ ಭವಿಷ್ಯಕ್ಕಾಗಿ ದಾರಿ ಮಾಡಿಕೊಡುವಾಗ ಪ್ರಸ್ತುತ ಸವಾಲುಗಳನ್ನು ಪರಿಹರಿಸುವ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಇಂಜಿನಿಯರ್ಗಳು ವಹಿಸುವ ನಿರ್ಣಾಯಕ ಪಾತ್ರವನ್ನು ಈ ಥೀಮ್ ಎತ್ತಿ ತೋರಿಸುತ್ತದೆ.* ಹೈದರಾಬಾದ್ ನ್ನು ನಗರವನ್ನಾಗಿ ಮಾಡಿದ ಸಂಪೂರ್ಣ ಶ್ರೇಯಸ್ಸು ಡಾ.ವಿಶ್ವೇಶ್ವರಯ್ಯನವರಿಗೆ ಸಲ್ಲುತ್ತದೆ. ಅವರು ಅಲ್ಲಿ ಪ್ರವಾಹ ರಕ್ಷಣೆ ವ್ಯವಸ್ಥೆ ವಿನ್ಯಾಸ ಮಾಡಿದರು. ಅವರು ಭಾರತದಾದ್ಯಂತ ಪ್ರಸಿದ್ಧರಾದರು. ಸಮುದ್ರ ಕೊರೆತದಿಂದ ವಿಶಾಖಪಟ್ಟಣಂ ಬಂದರನ್ನು ರಕ್ಷಿಸುವ ವ್ಯವಸ್ಥೆ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.* ಈ ದಿನ ಇಂಜಿನಿಯರ್ ದಿನವನ್ನು ಆಚರಣೆ ಮಾಡುವ ಮೂಲಕ ವಿಶ್ವೇಶ್ವರಯ್ಯ ಅವರ ಜೀವನವನ್ನು ಮತ್ತು ಅವರು ಮಾಡಿದ ಸಾಧನೆಯನ್ನು ಸ್ಮರಿಸಿಕೊಳ್ಳಲಾಗುತ್ತದೆ.* ವಿಶ್ವೇಶ್ವರಯ್ಯನವರನ್ನು ಆಧುನಿಕ ಮೈಸೂರು ರಾಜ್ಯದ ಪಿತಾಮಹ ಎಂದು ಗೌರವಿಸಲಾಗಿದೆ. ಅವರು ಮೈಸೂರು ಸರ್ಕಾದ ಜೊತೆ ಹಲವು ಕಾರ್ಖಾನೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿದರು.* ವಿಶೇಷವಾಗಿ ಮೈಸೂರು ಸೋಪ್ ಫ್ಯಾಕ್ಟರಿ, ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೈಸೂರು ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಸ್ಥಾಪಿಸಿದರು.* ಪ್ರಪಂಚದಾದ್ಯಂತದ ಇಂಜಿನಿಯರ್ಗಳನ್ನು ಪ್ರೋತ್ಸಾಹಿಸಲು ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ. ಇಂಜಿನಿಯರ್ ಡೇ ಅನ್ನು ಭಾರತದಲ್ಲಿ ಮಾತ್ರವಲ್ಲದೆ ಆಚರಣೆ ಮಾಡಲಾಗುತ್ತದೆ. ಜೂನ್ 16 ರಂದು ಅರ್ಜೆಂಟೀನಾದಲ್ಲಿ, ಮೇ 7 ರಂದು ಬಾಂಗ್ಲಾದೇಶದಲ್ಲಿ, ಜೂನ್ 15 ರಂದು ಇಟಲಿಯಲ್ಲಿ, ಡಿಸೆಂಬರ್ 5 ರಂದು ಟರ್ಕಿಯಲ್ಲಿ, ಇರಾನ್ನಲ್ಲಿ ಫೆಬ್ರವರಿ 24, ಬೆಲ್ಜಿಯಂನಲ್ಲಿ ಮಾರ್ಚ್ 20 ರಂದು ಮತ್ತು ಸೆಪ್ಟೆಂಬರ್ 14 ರಂದು ರೊಮೇನಿಯಾದಲ್ಲಿ ಇಂಜಿನಿಯರ್ ದಿನ ಆಚರಿಸಲಾಗುತ್ತದೆ.