* ಹೊಸ 'ಜನ ವಿಶ್ವಾಸ ಕಾಯ್ದೆ'ಯು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದ್ದು, ಈ ಕುರಿತು ಕೇಂದ್ರ ಸರ್ಕಾರ ಆಗಸ್ಟ್ 31 ರಂದು (ಗುರುವಾರ) ಅಧಿಸೂಚನೆ ಪ್ರಕಟಿಸಿದೆ.* ಪತ್ರಿಕೆ ಮತ್ತು ಪುಸ್ತಕಗಳ ನೋಂದಣಿ ಕಾಯ್ದೆ (ಪಿಆರ್‌ಪಿ ಕಾಯ್ದೆ) ಉಲ್ಲಂಘಿಸಿದ ಸಂದರ್ಭದಲ್ಲಿ ಪ್ರಕಾಶಕರಿಗೆ ಹಾಗೂ ಮುದ್ರಣಾಲಯಗಳನ್ನು ನಡೆಸುವವರಿಗೆ ಇನ್ನು ಮುಂದೆ ಜೈಲು ವಿಧಿಸಲಾಗುವುದಿಲ್ಲ.* ಈ ಮೊದಲು ಪತ್ರಿಕೆ ಮತ್ತು ಪುಸ್ತಕಗಳ ನೋಂದಣಿ ಕಾಯ್ದೆ ಉಲ್ಲಂಘನೆ ಸಂದರ್ಭದಲ್ಲಿ ತಪ್ಪಿ ತಸ್ಥರಿಗೆ ಕಾಯ್ದೆಯ ಸೆಕ್ಷನ್ 12, 13 ಹಾಗೂ 14ರಡಿ ಜೈಲು ಶಿಕ್ಷೆ ವಿಧಿಸಲಾಗಿದ್ದು, ಈ ಕಾಯ್ದೆಯಲ್ಲಿನ ಅವಕಾಶಗಳನ್ನು ತೆಗೆದು ಹಾಕಲಾಗಿದೆ.* ಕಾಯ್ದೆಯ ಉಲ್ಲಂಘನೆಯಂತಹ ಸಂದರ್ಭಗಳಲ್ಲಿ, ನೋಂದಣಿ ಪ್ರಮಾಣಪತ್ರವನ್ನುರದ್ದು ಮಾಡುವ ಮತ್ತು ಅಮಾನತು ಮಾಡುವ ಅಧಿಕಾರವನ್ನು ಪ್ರೆಸ್ ರಿಜಿಸ್ಟ್ರಾರ್ ಅವರಿಗೆ ನೀಡುವ ಅವಕಾಶಗಳನ್ನು 'ಜನ ವಿಶ್ವಾಸ ಕಾಯ್ದೆ' ಹೊಂದಿದೆ.* 'ಪತ್ರಿಕೆ ಮತ್ತು ನೋಂದಣಿ ಮೇಲ್ಮನವಿ ಮಂಡಳಿ'ಯ (ಪಿಆರ್ ಎಬಿ) ನ್ನು ಅಧಿಕಾರ ವ್ಯಾಪ್ತಿಯನ್ನು ಸಹ ಈ ಕಾಯ್ದೆಯಡಿ ವಿಸ್ತರಿಸಲಾಗಿದ್ದು, ಪ್ರೆಸ್ ರಿಜಿಸ್ಟ್ರಾರ್ ರವರನ್ನು ಮಂಡಳಿಯು ಒಳಗೊಂಡಿದೆ.