* ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮತ್ತು ಅಮೆರಿಕದ ಎನ್‌ಎಸ್‌ಎ ಜೇಕ್ ಸುಲ್ಲಿವನ್ ನಡುವೆ ನಡೆದ ಎಮರ್ಜಿಂಗ್ ಟೆಕ್ನಾಲಜಿ (ಐಸಿಇಟಿ) ಕುರಿತ ಸಭೆಯಲ್ಲಿ ಪೂರೈಕೆ ಸರಪಳಿ, ಸೆಮಿಕಂಡಕ್ಟರ್‌ಗಳು ಮತ್ತು ನಿರ್ಣಾಯಕ ಖನಿಜಗಳ ಕುರಿತ ನಿಕಟ ವ್ಯವಹಾರ ಮತ್ತು ಸಹಕಾರಕ್ಕೆ ಭಾರತ ಮತ್ತು ಅಮೆರಿಕ ಒಪ್ಪಿಗೆ ಸೂಚಿಸಿವೆ. * ನವದೆಹಲಿಯಲ್ಲಿ ಜೂನ್ 17 ರಂದು (ಸೋಮವಾರ) ನಡೆದ ಕ್ರಿಟಿಕಲ್ ಮತ್ತು ಎಮರ್ಜಿಂಗ್ ಟೆಕ್ನಾಲಜಿ (ಐಸಿಇಟಿ) ನೇತೃತ್ವದ ಭಾರತ- ಅಮೆರಿಕ ಉಪಕ್ರಮದ ಸಭೆಯಲ್ಲಿ ಸೆಮಿಕಂಡಕ್ಟರ್ಸ್, ನಿರ್ಣಾಯಕ ಖನಿಜಗಳ ಮೇಲೆ ಸಹಕಾರ ಹೆಚ್ಚಿಸಲು ಭಾರತ- ಅಮೆರಿಕ ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗಿದೆ.* ಯುದ್ಧ ಸಾಮಗ್ರಿಗಳಿಗಾಗಿ ಅರೆವಾಹಕ ವಿನ್ಯಾಸ ಮತ್ತು ಉತ್ಪಾದನಾ ಪ್ರಕ್ರಿಯೆಗಳನ್ನು ಸಹ - ಅಭಿವೃದ್ಧಿಪಡಿಸಲು ಭಾರತ ಮತ್ತು ಅಮೆರಿಕ ಜೂನ್ 17 ರಂದು (ಸೋಮವಾರ) ಹೊಸ ಕಾರ್ಯತಂತ್ರದ ಅರೆವಾಹಕ (ಸೆಮಿಕಂಡಕ್ಟರ್) ಪಾಲುದಾರಿಕೆಯನ್ನು ಪ್ರಾರಂಭಿಸಿವೆ.* ಭಾರತದಲ್ಲಿನ ಸೆಮಿಕಂಡಕ್ಟರ್ ಉದ್ಯಮದಲ್ಲಿ ಭಾರತೀಯ ಮತ್ತು ಅಮೆರಿಕ ಹೂಡಿಕೆದಾರರೊಂದಿಗಿನ ಈ ಒಪ್ಪಂದವು ಭಾರತದ ದೃಢವಾದ ಸೆಮಿಕಂಡಕ್ಟರ್ ಮತ್ತು ಮಾಹಿತಿ ಸಂವಹನ ತಂತ್ರಜ್ಞಾನಕ್ಕೆ ಪೂರಕ ವಾತಾವರಣ ನಿರ್ಮಿಸುವ ಗುರಿಯನ್ನು ಹೊಂದಿದೆ.* ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ತೈವಾನ್‌ನ ಪವರ್‌ಚಿಪ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ (PSMC) ಗುಜರಾತ್‌ನ ಧೋಲೆರಾದಲ್ಲಿ ಭಾರತದ ಮೊದಲ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಪ್ಲಾಂಟ್ (ಫ್ಯಾಬ್) ಅನ್ನು ಸ್ಥಾಪಿಸುತ್ತದೆ. * ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಪ್ರೈವೇಟ್ ಲಿಮಿಟೆಡ್ (TSAT) ಅಸ್ಸಾಂನ ಮೊರಿಗಾಂವ್‌ನಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸುತ್ತದೆ.