* ಪ್ಯಾರಿಸ್ ಒಲಂಪಿಕ್ಸ್ನಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್‌ ಅವರು ಮಹಿಳೆಯರ 50 ಕೆ.ಜಿ ಪ್ರಿಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ವಿನೇಶ್ ಫೋಗಟ್‌ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಲ್ಲದೇ ಒಲಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತವಾದಂತಾಗಿದೆ.* ಕ್ಯೂಬಾದ ಯುಸ್‌ನೈಲೆಸ್‌ ಗುಜ್ಮನ್‌ ಎದುರು 5-0 ಅಂತರದಿಂದ ಗೆದ್ದು ಫೈನಲ್ಗೆ ಪ್ರವೇಶ ಮಾಡಿದ್ದಾರೆ.  ಇದರೊಂದಿಗೆ ಪ್ಯಾರೀಸ್ ಒಲಿಂಪಿಕ್ಸ್ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. * ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಹಾಗೂ ವಿಶ್ವ ನಂ.1 ಕುಸ್ತಿಪಟುವಾಗಿದ್ದ ಜಪಾನಿನ ಯ್ಯೂ ಸುಸುಕಿ ಅವರ ವಿರುದ್ದ 3-2 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದ್ದು, ಹಾಗೂ ಕ್ವಾರ್ಟರ್‌ ಫೈನಲ್‌ನಲ್ಲಿ ಉಕ್ರೇನ್‌ನ ಮೂರು ಬಾರಿ ಕಾಮನ್‌ವೆಲ್ತ್ ಗೇಮ್ಸ್‌ ಚಿನ್ನದ ಪದಕ ವಿಜೇತೆ ಒಕ್ಸಾನಾ ಲಿವೀಚ್‌ ಅವರ ಎದುರು 7-5 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿ ಫೈನಲ್ ಗೆ ತಲುಪಿದರು.* ವಿನೇಶ್ ಫೋಗಟ್ ಅವರಿಗೆ ಮೂರೂ ಬಾರಿಗೆ ಕಾಮನ್ವೆಲ್ಟ್ ಕ್ರೀಡೆಗಳ ಚಾಂಪಿಯನ್, ಒಂದು ಏಷ್ಯನ್ ಗೇಮ್ಸ್ ಚಿನ್ನ, ಎಂಟು ಬಾರಿ ಏಷ್ಯನ್ ಚಾಂಪಿಯನ್ ಷಿಪ್ ಪದಕಗಳು, ಎರಡು ವಿಶ್ವ ಚಾಂಪಿಯನ್ ಷಿಪ್ ಕಂಚು ಗೆದ್ದುಕೊಂಡಿದ್ದಾರೆ.* ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಉಕ್ರೇನ್ ನ ಕಿಸ್ತಿಪಟು ಸುಸಾಕಿ ಅವರಿಗೆ ಮೊದಲ ಬಾರಿಗೆ ಸೋಲಾಗಿದೆ. ವಿನೇಶ್ ಫೋಗಟ್ ಅವರು ಆಗಸ್ಟ್ 13 ರಂದು (ಮಂಗಳವಾರ) ರಾತ್ರಿ 10-30ಕ್ಕೆ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯಸ್ನಿಲಿಸ್ ಗುಜ್ಮಾನ್ ಅವರನ್ನು ಎದುರಿಸಲಿದ್ದಾರೆ.