* ಸೆಲ್ಕೊ ಸೋಲಾರ್ ಲೈಟ್ ಪ್ರೈವೆಟ್ ಲಿಮಿಟೆಡ್ ಕಂಪನಿಗೆ 2025ರ ಅಂತರರಾಷ್ಟ್ರೀಯ ‘ಆಶ್ಡೆನ್’ ಪ್ರಶಸ್ತಿ ಲಭಿಸಿದೆ. ‘ಗ್ರೀನ್ ಆಸ್ಕರ್’ ಎಂದೇ ಪ್ರಸಿದ್ಧಿಯಾದ ಈ ಪ್ರಶಸ್ತಿಯನ್ನು ಕಂಪನಿ ಮೂರನೇ ಬಾರಿ ಜಯಿಸಿದೆ.* ಈ ಪ್ರಶಸ್ತಿಯ 25ನೇ ಆವೃತ್ತಿಯ ಸಮಾರಂಭ ಲಂಡನ್ನ ರಾಯಲ್ ಜಿಯೋಗ್ರಾಫಿಕಲ್ ಸೊಸೈಟಿಯಲ್ಲಿ ನಡೆಯಿತು. ಪ್ರಶಸ್ತಿಯನ್ನು ಇಂಗ್ಲೆಂಡ್ನ ಹವಾಮಾನ ರಾಯಭಾರಿ ರಾಚೆಲ್ ಕೈಟ್ ಹಾಗೂ ಉಗಾಂಡದ ಪರಿಸರವಾದಿ ವನೆಸ್ಸಾ ನಕೇಟ್ ಪ್ರದಾನಿಸಿದರು.* ಸೆಲ್ಕೊ ಕಂಪನಿಗೆ ಇದಕ್ಕೂ ಮೊದಲು 2005 ಮತ್ತು 2007ರಲ್ಲಿ ಈ ಪ್ರಶಸ್ತಿ ಲಭಿಸಿತ್ತು. ಕಂಪನಿಯು ಡಾ. ಹರೀಶ್ ಹಂದೆ ಮತ್ತು ನೆವಿಲ್ಲೆ ವಿಲಿಯಮ್ಸ್ ಅವರ ನೇತೃತ್ವದಲ್ಲಿ 1995ರಲ್ಲಿ ಸ್ಥಾಪನೆಯಾಯಿತು.* ಇಂದಿಗೆ ಸೆಲ್ಕೊ ಸೋಲಾರ್ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಹಸಿರು ಇಂಧನವನ್ನು ಜನಸಾಮಾನ್ಯರಿಗೆ ನೀಡುತ್ತಿರುವ ಪ್ರಮುಖ ಸಾಮಾಜಿಕ ಉದ್ಯಮವಾಗಿದೆ.