* ಯೋಧರ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗಬಲ್ಲ ವಿಶೇಷ ಶೂ ಒಂದನ್ನು ಇಂದೋರ್‌ನ ಐಐಟಿ ತಜ್ಞರ ತಂಡ ಅಭಿವೃದ್ಧಿಪಡಿಸಿದೆ. ಈ ಶೂ ಸ್ವಯಂ ವಿದ್ಯುತ್ ಶಕ್ತಿ ಉತ್ಪಾದಿಸುವುದರ ಜೊತೆಗೆ ಅವರಿರುವ ಸ್ಥಳವನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ.* ಪ್ರೊ.ಐ.ಎ ಪಳಿನಿ ಮಾರ್ಗದರ್ಶನದಲ್ಲಿ" ಅಭಿವೃದ್ಧಿಪಡಿಸಲಾಗಿರುವ ಈ ಮಾದರಿಯ ಹತ್ತು ಜೊತೆ ಶೂಗಳನ್ನು ಈಗಾಗಲೇ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ಕಳುಹಿಸಲಾಗಿದೆ.* ಪಾದರಕೆಯ ಅಡಿಭಾಗದಲ್ಲಿ ಅಳವಡಿಸಲಾಗಿರುವ ಉಪಕರಣವು, ಯೋಧರು ಸೇರಿದಂತೆ ಯಾವುದೇ ವ್ಯಕ್ತಿ ಪ್ರತಿ ಹೆಜ್ಜೆ ಇಟ್ಟಾಗಲು ವಿದ್ಯುತ್ ಉತ್ಪಾದಿಸಬಲ್ಲದು. ಹೀಗೆ ಉತ್ಪಾದಿಸಿದ್ದ ವಿದ್ಯುತ್‌ನಿಂದ ಸಣ್ಣ ಉಪಕರಣಗಳನ್ನು ಬಳಸಬಹುದು. * ಜಿಪಿಎಸ್‌ ಮತ್ತು ರೇಡಿಯೋ ತರಂಗಾಂತರ ಗುರುತಿಸುವಿಕೆಯಿಂದ (ಆರ್ ಎಫ್‌ಐಡಿ), ಅಗತ್ಯವಿರುವಾಗ ಅವರಿರುವ ಸ್ಥಳವನ್ನು ಪತ್ತೆ ಮಾಡಬಹುದು ಎಂದು ಐಐಟಿ ತಜ್ಞರ ತಂಡ ಹೇಳಿದೆ.* ಇದು ಯೋಧರಿಗೆ ಮಾತ್ರವಲ್ಲದೇ, ಮೆದುಳು ಸಂಬಂಧಿ ಕಾಯಿಲೆಗಳಿಂದ ಬಳಲುವ ವೃದ್ದರು, ವಿದ್ಯಾರ್ಥಿಗಳು ಮತ್ತು ಪರ್ವತಾ ರೋಹಿಗಳಿರುವ ಸ್ಥಳವನ್ನು ಪತ್ತೆ ಮಾಡಬಹುದಾಗಿದ್ದು, ಕ್ರೀಡಾಪಟುಗಳ, ಕಾರ್ಖಾನೆಗಳಲ್ಲಿ ಕೆಲಸಗಾರರ ಹಾಜರಾತಿ ಮತ್ತು ಕೆಲಸವನ್ನು ಪರಿಶೀಲಿಸಲು ಸಹಕಾರಿಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.