* ಭಾರತೀಯ ಮತ್ತು ಹಿಂದೂಸ್ತಾನ್ ಏರೋನಾಟಿಕಲ್ ಲಿ. (ಎಚ್ಎಎಲ್) ನಡುವೆ 62,000 ಕೋಟಿ ರೂ. ಮೊತ್ತದ ಬೃಹತ್ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.* 62,000 ಕೋಟಿ ರೂ. ವೆಚ್ಚದಲ್ಲಿ 156 'ಮೇಡ್ ಇನ್ ಇಂಡಿಯಾ ಲೈಟ್ ಕಂಬ್ಯಾಟ್ ಪ್ರಚಂಡ' ಹೆಲಿಕಾಪ್ಟರ್ಗಳನ್ನು ತಯಾರಿಸಲಾಗುತ್ತದೆ.* ಎಚ್ಎಎಲ್, 2024ರ ಜೂನ್ನಲ್ಲಿ 156 ಲೈಟ್ ಕಂಬ್ಯಾಟ್ ಹೆಲಿಕಾಪ್ಟರ್ಗಳ ತಯಾರಿಕೆಗೆ ಒಪ್ಪಿಗೆ ಪಡೆದಿತ್ತು. ಈ 156 ಹೆಲಿಕಾಪ್ಟರ್ಗಳಲ್ಲಿ 90 ಭಾರತೀಯ ಸೇನೆಗೆ ಮತ್ತು 60 ಭಾರತೀಯ ವಾಯುಪಡೆಗೆ ಹಂಚಿಕೆಯಾಗುತ್ತದೆ.* ಈ ಹೆಲಿಕಾಪ್ಟರ್ಗಳನ್ನು ಕರ್ನಾಟಕದ ಎಚ್ಎಎಲ್ನ ತುಮಕೂರು ಘಟಕದಲ್ಲಿ ತಯಾರಿಸಲಾಗುತ್ತಿದೆ. * ಲೈಟ್ ಕಾಂಬ್ಯಾಟ್ ಪ್ರಚಂಡ ಹೆಲಿಕಾಪ್ಟರ್ಗಳು 5,000 ದಿಂದ 16,400 ಅಡಿ ಎತ್ತರದಲ್ಲಿ ಇಳಿಯುವ ಮತ್ತು ಟೇಕ್ಆಫ್ ಆಗುವ ಸಾಮರ್ಥ್ಯ ಹೊಂದಿವೆ.* ಸಿಯಾಚಿನ್ ಹಿಮನದಿ, ಪೂರ್ವ ಲಡಾಖ್ನ ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಇವು ಸೂಕ್ತ. ಹೆಲಿಕಾಪ್ಟರ್ಗಳು ಗಾಳಿಯಿಂದ ನೆಲಕ್ಕೆ, ಗಾಳಿಯಿಂದ ಗಾಳಿಗೆ ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿವೆ.