Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಹೆದ್ದಾರಿ ಹೂಡಿಕೆಯಲ್ಲಿ ಹೊಸ ಕ್ರಾಂತಿ: ಜನಸಾಮಾನ್ಯರಿಗೂ ಅವಕಾಶ ನೀಡಲಿರುವ NHAI ನೂತನ ‘RIIT’ ಪಬ್ಲಿಕ್ InvIT!
25 ಡಿಸೆಂಬರ್ 2025
* ಭಾರತದ ರಾಷ್ಟ್ರೀಯ ಹೆದ್ದಾರಿ ಆಸ್ತಿಗಳನ್ನು ಮೌಲ್ಯೀಕರಣ (Asset Monetisation) ಮಾಡುವ ಮಹತ್ವದ ಹೆಜ್ಜೆಯಾಗಿ,
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)
ಪ್ರಾಯೋಜಿತ
ರೈತ್ಮಾರ್ಗ್ ಇನ್ಫ್ರಾ ಇನ್ವೆಸ್ಟ್ಮೆಂಟ್ ಟ್ರಸ್ಟ್ (RIIT)
ಗೆ
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI)
ಸಾರ್ವಜನಿಕ ಇನ್ಫ್ರಾ ಇನ್ವೆಸ್ಟ್ಮೆಂಟ್ ಟ್ರಸ್ಟ್ (Public InvIT) ಆಗಿ ಕಾರ್ಯನಿರ್ವಹಿಸಲು ಅನುಮೋದನೆ ನೀಡಿದೆ.
* ಈ ಅನುಮೋದನೆಯನ್ನು
ಡಿಸೆಂಬರ್ 24, 2025ರಂದು
ಘೋಷಿಸಲಾಗಿದ್ದು, ಇದು ಭಾರತದ ಮೂಲಸೌಕರ್ಯ ಹಣಕಾಸು ವ್ಯವಸ್ಥೆ ಹಾಗೂ ಆಸ್ತಿ ಮೌಲ್ಯೀಕರಣ ಕಾರ್ಯಕ್ರಮಕ್ಕೆ ಹೊಸ ಬಲ ನೀಡುವ ಹೆಜ್ಜೆಯಾಗಿದೆ.
*
RIIT ಎನ್ನುವುದು NHAI ಪ್ರಾಯೋಜಿತ ಇನ್ಫ್ರಾ ಇನ್ವೆಸ್ಟ್ಮೆಂಟ್ ಟ್ರಸ್ಟ್
ಆಗಿದ್ದು, ಕಾರ್ಯನಿರ್ವಹಣೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಆಸ್ತಿಗಳ ಮೌಲ್ಯೀಕರಣದ ಮೂಲಕ ಹಣಕಾಸು ಸಂಪನ್ಮೂಲಗಳನ್ನು ಸಂಗ್ರಹಿಸುವ ಉದ್ದೇಶ ಹೊಂದಿದೆ; ಸಾರ್ವಜನಿಕ InvIT ಆಗಿ ಪರಿವರ್ತನೆಯಾದ ಬಳಿಕ ಸಾಮಾನ್ಯ (ರಿಟೇಲ್) ಹೂಡಿಕೆದಾರರಿಗೆ ಹೆದ್ದಾರಿ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡುವ ಅವಕಾಶ ಲಭ್ಯವಾಗಲಿದ್ದು, ಇದರಿಂದ ದೇಶದ ರಸ್ತೆ ಅಭಿವೃದ್ಧಿಯಲ್ಲಿ ಜನಸಾಮಾನ್ಯರ ಭಾಗವಹಿಸುವಿಕೆ ಮತ್ತಷ್ಟು ವಿಸ್ತರಿಸಲಿದೆ.
* RIITನ ಪ್ರಮುಖ ಉದ್ದೇಶಗಳು :-
=>
ಕಾರ್ಯನಿರ್ವಹಣೆಯಲ್ಲಿರುವ ಹೆದ್ದಾರಿ ಆಸ್ತಿಗಳ ಮೌಲ್ಯೀಕರಣ
=> ದೀರ್ಘಕಾಲೀನ ಹಾಗೂ ಗುಣಮಟ್ಟದ ಹೂಡಿಕೆ ವೇದಿಕೆ ನಿರ್ಮಾಣ
=> ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಾರ್ವಜನಿಕ ಪಾಲ್ಗೊಳ್ಳುವಿಕೆ ವಿಸ್ತರಣೆ
* RIIT ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ NHAI ಈಗಾಗಲೇ
ರೈತ್ಮಾರ್ಗ್ ಇನ್ಫ್ರಾ ಇನ್ವೆಸ್ಟ್ಮೆಂಟ್ ಮ್ಯಾನೇಜರ್ಸ್ ಪ್ರೈವೇಟ್ ಲಿಮಿಟೆಡ್ (RIIMPL)
ಅನ್ನು ಸ್ಥಾಪಿಸಿದ್ದು, ಈ ಸಂಸ್ಥೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, NaBFID, ಅಕ್ಸಿಸ್ ಬ್ಯಾಂಕ್, ಬಜಾಜ್ ಫಿನ್ಸರ್ವ್ ವೆಂಚರ್ಸ್, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್ ಹಾಗೂ ಯೆಸ್ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಪಾಲುದಾರರಾಗಿವೆ.
* ಈ ಯೋಜನೆಯ ಮಹತ್ವ
=>
ಮೂಲಸೌಕರ್ಯ ಕ್ಷೇತ್ರಕ್ಕೆ:
ಈ ಯೋಜನೆಯಿಂದ ಹೊಸ ಹೆದ್ದಾರಿ ಯೋಜನೆಗಳಿಗೆ ಅಗತ್ಯವಾದ ಬಂಡವಾಳ ಬಿಡುಗಡೆ ಆಗಲಿದ್ದು, ರಾಷ್ಟ್ರೀಯ ಹೆದ್ದಾರಿ ಜಾಲ ಮತ್ತಷ್ಟು ಬಲಪಡಿಸಿ, ವೇಗವಾಗಿ ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದೆ.
=>
ಹೂಡಿಕೆದಾರರಿಗೆ:
ಹೂಡಿಕೆದಾರರಿಗೆ ಹೆದ್ದಾರಿ ಯೋಜನೆಗಳಲ್ಲಿ ನೇರವಾಗಿ ಹೂಡಿಕೆ ಮಾಡುವ ಅವಕಾಶ ದೊರೆಯಲಿದ್ದು, ಸ್ಥಿರ ಹಾಗೂ ದೀರ್ಘಾವಧಿಯ ಆದಾಯ ಪಡೆಯುವ ಸಾಧ್ಯತೆ ಇರುವುದರ ಜೊತೆಗೆ, ಷೇರು ಮತ್ತು ಬಾಂಡ್ಗಳ ಹೊರತಾಗಿ ಹೊಸ ಹಾಗೂ ಸುರಕ್ಷಿತ ಹೂಡಿಕೆ ಆಯ್ಕೆಯನ್ನೂ ಒದಗಿಸಲಿದೆ.
* ಇನ್ಫ್ರಾ ಇನ್ವೆಸ್ಟ್ಮೆಂಟ್ ಟ್ರಸ್ಟ್ (InvIT) ಎನ್ನುವುದು ಹೆದ್ದಾರಿ, ವಿದ್ಯುತ್ ಲೈನ್, ಪೈಪ್ಲೈನ್ ಮುಂತಾದ ಮೂಲಸೌಕರ್ಯ ಆಸ್ತಿಗಳಿಂದ ಉಂಟಾಗುವ ಆದಾಯವನ್ನು ಹೂಡಿಕೆದಾರರಿಗೆ ನಿಯಮಿತವಾಗಿ ವಿತರಿಸುವ ಹೂಡಿಕೆ ವ್ಯವಸ್ಥೆಯಾಗಿದ್ದು, ಇದರ ಮೂಲಕ ಆಸ್ತಿಗಳಲ್ಲೇ ಅಡಕವಾಗಿರುವ ಬಂಡವಾಳವನ್ನು ಬಿಡುಗಡೆ ಮಾಡಬಹುದು. ಹಾಗೂ ಇವುಗಳ ಮೂಲಕ ದೀರ್ಘಾವಧಿಯ ಹೂಡಿಕೆಗಳನ್ನು ಆಕರ್ಷಿಸುವುದು, ಹೂಡಿಕೆದಾರರಿಗೆ ಸ್ಥಿರ ಆದಾಯದ ಅವಕಾಶ ಒದಗಿಸುವುದು ಹಾಗೂ ಸಾರ್ವಜನಿಕ ಸಂಸ್ಥೆಗಳ ಮೇಲಿನ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ.
Take Quiz
Loading...