* ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಹೊಸ ಪ್ರಧಾನಿಯಾಗಿ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೆಕೊರ್ನು ಅವರನ್ನು ನೇಮಿಸಿದ್ದಾರೆ.* ಸೋಮವಾರ(ಆಗಸ್ಟ್ 08) ಸಂಸತ್ತಿನಲ್ಲಿ ವಿಶ್ವಾಸಮತ ಯಾಚನೆಯಲ್ಲಿ ವಿಫಲವಾದ ನಂತರ ಹಿಂದಿನ ಪ್ರಧಾನಿಗೆ ರಾಜೀನಾಮೆ ನೀಡಬೇಕಾಯಿತು.* 39 ವರ್ಷದ ಲೆಕೊರ್ನು ಫ್ರಾನ್ಸ್ನ ಅತ್ಯಂತ ಕಿರಿಯ ರಕ್ಷಣಾ ಸಚಿವರಾಗಿದ್ದರು. ಅವರು 2030ರ ಮಿಲಿಟರಿ ವಿಸ್ತರಣಾ ಯೋಜನೆಯ ಪ್ರಮುಖ ಶಕ್ತಿಯಾಗಿದ್ದರು ಮತ್ತು ಮ್ಯಾಕ್ರೋನ್ ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದಾರೆ.* 2017ರಲ್ಲಿ ಮ್ಯಾಕ್ರೋನ್ ಅವರ ಕೇಂದ್ರವಾದಿ ಚಳವಳಿಗೆ ಸೇರಿದ ಲೆಕೊರ್ನು ಸ್ಥಳೀಯ ಆಡಳಿತ, ಸಾಗರೋತ್ತರ ಪ್ರದೇಶಗಳು ಹಾಗೂ “ದೊಡ್ಡ ಚರ್ಚೆ” ಸಮಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. * 2021ರಲ್ಲಿ ಗ್ವಾಡೆಲೋಪ್ ಅಶಾಂತಿಯ ಸಂದರ್ಭದಲ್ಲಿ ಸ್ವಾಯತ್ತತೆ ಮಾತುಕತೆಗಳನ್ನು ಆರಂಭಿಸಿದ್ದರು.* ಕೇವಲ ಒಂದು ವರ್ಷದಲ್ಲಿ ಫ್ರಾನ್ಸ್ನ ನಾಲ್ಕನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.