* ಭಾರತ ಮತ್ತು ಇಂಗ್ಲೆಂಡ್ ನಡುವಿನ ಮುಂದಿನ ಟೆಸ್ಟ್ ಸರಣಿಗೆ ಹೊಸ ಟ್ರೋಫಿ ನೀಡಲಾಗಿದ್ದು, ಅದಕ್ಕೆ ಸಚಿನ್ ತೆಂಡೂಲ್ಕರ್ – ಜೇಮ್ಸ್ ಆ್ಯಂಡರ್ಸನ್ ಟ್ರೋಫಿ ಎಂಬ ಹೆಸರನ್ನು ಇಡಲಾಗಿದೆ.* ಈ ಹೊಸ ಟ್ರೋಫಿಯ ಅನಾವರಣ ಜೂನ್ 20ರಂದು ಹೆಡಿಂಗ್ಲಿಯಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯಕ್ಕೂ ಮೊದಲು ನಡೆಯಲಿದೆ ಎಂದು ಬಿಬಿಸಿ ವರದಿ ಮಾಡಿದೆ.* ಈ ಕುರಿತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.* ಈ ಹಿಂದೆ ಭಾರತ–ಇಂಗ್ಲೆಂಡ್ ನಡುವಿನ ಇಂಗ್ಲೆಂಡ್ನಲ್ಲಿ ನಡೆಯುತ್ತಿದ್ದ ಟೆಸ್ಟ್ ಸರಣಿಗೆ ಪಟೌಡಿ ಟ್ರೋಫಿ ಎಂಬ ಹೆಸರು ಇತ್ತು. ಈ ಟ್ರೋಫಿಗೆ ನಿವೃತ್ತಿ ನೀಡಲು ಇಸಿಬಿ ಮಾರ್ಚ್ನಲ್ಲಿ ಪಟೌಡಿ ಕುಟುಂಬಕ್ಕೆ ಪತ್ರ ಬರೆದಿತ್ತು.* ತೇಂಡೂಲ್ಕರ್ 200 ಟೆಸ್ಟ್ ಪಂದ್ಯಗಳಲ್ಲಿ 15,921 ರನ್ ಗಳಿಸಿದ್ದು, ಆ್ಯಂಡರ್ಸನ್ 704 ವಿಕೆಟ್ ಪಡೆದು ಟೆಸ್ಟ್ ಇತಿಹಾಸದ ಅಗ್ರ ಬೌಲರ್ ಎನಿಸಿಕೊಂಡಿದ್ದಾರೆ. ಇವರಿಬ್ಬರು 14 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆ್ಯಂಡರ್ಸನ್ ತೆಂಡೂಲ್ಕರ್ನ ವಿಕೆಟ್ 9 ಬಾರಿ ಪಡೆದಿದ್ದಾರೆ.